ಬೆಂಗಳೂರು: ಎಲ್ಲ ಕಂಪನಿಗಳ ಕೆಲಸದ ಅವಧಿ 14 ಗಂಟೆಗೆ ಹೆಚ್ಚಿಸಬೇಕೆನ್ನುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲ ಕಂಪನಿಗಳಿಗೆ 14 ಗಂಟೆ ಕೆಲಸದ ಅವಧಿ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಬಂದಿಲ್ಲ ಎಂದು ಹೇಳಿದ್ದಾರೆ.
14 ಗಂಟೆ ಕೆಲಸದ ಅವಧಿ ಹೆಚ್ಚಳ ಮಾಡುವ ಪ್ರಸ್ತಾಪ ಎಲ್ಲಾ ಕಂಪನಿಗಳಿಗೆ ಅನ್ವಯ ಆಗುವುದಿಲ್ಲ. ಎಲ್ಲಾ ಕಂಪನಿಗಳಿಗೆ ಅನ್ವಯ ಆಗುತ್ತದೆ ಎಂಬ ಸುದ್ದಿ ಹರಡಿದೆ ಅಷ್ಟೆ. ಕೆಲವು ಕಂಪನಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಯಾವ ಕಂಪನಿಗಳು 14 ಗಂಟೆ ಕೆಲಸದ ಅವಧಿಗೆ ಮನವಿ ಸಲ್ಲಿಕೆ ಮಾಡಿರುತ್ತವೆಯೋ ಅಂತಹ ಕಂಪನಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ. ಎಲ್ಲಾ ಕಂಪನಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಉದ್ಯಮಿಗಳು ಪ್ರಸ್ತಾಪ ಮಾಡಿದ್ದರು. ಸದ್ಯ ಇರುವ 12 ಗಂಟೆ ಕೆಲಸದ ಅವಧಿಯನ್ನು 2 ಗಂಟೆ ಹೆಚ್ಚಿಸಿ 14 ಗಂಟೆಗೆ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ-1961 ಕ್ಕೆ ತಿದ್ದುಪಡಿ ತರಬೇಕು ಎಂದು ಕಂಪನಿಗಳು ಪ್ರಸ್ತಾಪಿಸಿವೆ ಎನ್ನಲಾಗಿದೆ.








