2021ನೇ ವರ್ಷದಲ್ಲಿ ನಡೆಯಲಿದೆ ನಾಲ್ಕು ಗ್ರಹಣಗಳು four eclipses 2021
ಹೊಸದಿಲ್ಲಿ, ಡಿಸೆಂಬರ್28: 2021 ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರ ಗ್ರಹಣ ಸೇರಿದಂತೆ ನಾಲ್ಕು ಗ್ರಹಣಗಳು ನಡೆಯಲಿವೆ. ಆದರೆ ಭಾರತದಲ್ಲಿ ಕೇವಲ ಎರಡು ಚಂದ್ರಗ್ರಹಣ ಮಾತ್ರ ಗೋಚರಿಸುತ್ತದೆ ಎಂದು ಉಜ್ಜಯಿನಿ ಮೂಲದ ಜಿವಾಜಿ ವೀಕ್ಷಣಾಲಯದ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತ್ ಭಾನುವಾರ ತಿಳಿಸಿದ್ದಾರೆ. four eclipses 2021
ಮೊದಲನೆಯ ಚಂದ್ರ ಗ್ರಹಣವು ಮೇ 26 ರಂದು ನಡೆಯಲಿದ್ದು, ಪಶ್ಚಿಮ ಬಂಗಾಳ, ಕರಾವಳಿ ಒಡಿಶಾ ಮತ್ತು ಸಿಕ್ಕಿಂ ಹೊರತುಪಡಿಸಿ ಈಶಾನ್ಯ ರಾಜ್ಯಗಳಲ್ಲಿ ಕಾಣಲಿದೆ ಎಂದು ಅವರು ತಿಳಿಸಿದರು.
ಈ ಖಗೋಳ ಘಟನೆಯ ಸಮಯದಲ್ಲಿ ಭೂಮಿಯು ಶೇಕಡಾ 101.6 ರಷ್ಟು ಚಂದ್ರನನ್ನು ಆವರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಜೂನ್ 10 ರಂದು ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ನಿಮ್ಮಲ್ಲಿ ಇದೆಯೇ ಈ ಒಂದು ರೂಪಾಯಿಯ ಹಳೆಯ ನೋಟು
ಈ ಸಂದರ್ಭದಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರಲಿದ್ದು, ಸೂರ್ಯನು ಶೇಕಡಾ 94.3 ರಷ್ಟು ಆವರಿಸಿಕೊಳ್ಳುತ್ತಾನೆ ಎಂದು ಗುಪ್ತ್ ಹೇಳಿದ್ದಾರೆ.
ನವೆಂಬರ್ 19 ರಂದು ಭಾಗಶಃ ಚಂದ್ರ ಗ್ರಹಣವನ್ನು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಬಹಳ ಕಡಿಮೆ ಅವಧಿಗೆ ಕಾಣಬಹುದು ಎಂದು ಅವರು ಹೇಳಿದ್ದಾರೆ.
ಈ ಸಮಯದಲ್ಲಿ, ಚಂದ್ರನ ಶೇಕಡಾ 97.9 ರಷ್ಟು ಭೂಮಿಯ ನೆರಳಿನಿಂದ ಆವೃತವಾಗಿರುತ್ತದೆ. 2021 ರ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 4 ರಂದು ನಡೆಯಲಿದ್ದು ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಅವರು ಹೇಳಿದರು.
ಮೇ 26 ರಂದು ಖಗ್ರಾಸ ಚಂದ್ರಗ್ರಹಣ, ಜೂನ್10 ರಂದು ಕಂಕಣ ಸೂರ್ಯಗ್ರಹಣ, ನವೆಂಬರ್ 19 ರಂದು ಪಾರ್ಶ್ವ ಚಂದ್ರಗ್ರಹಣ, ಡಿಸೆಂಬರ್ 4 ರಂದು ಖಗ್ರಾಸ ಸೂರ್ಯಗ್ರಹಣ ನಡೆಯಲಿದೆ.
ಈ ವರ್ಷ ಎರಡು ಸೂರ್ಯ ಮತ್ತು ಎರಡು ಚಂದ್ರ ಗ್ರಹಣಗಳು ಸಂಭವಿಸಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶ್ವಾಸಕೋಶದ ಸೋಂಕಿನ ವಿರುದ್ಧ ಹೋರಾಡುವ ಮನೆಮದ್ದುಗಳು https://t.co/WnyybZvP4t
— Saaksha TV (@SaakshaTv) December 26, 2020
ಪಾಕಿಸ್ತಾನದ ನಿಜ ಬಣ್ಣ ಮತ್ತೊಮ್ಮೆ ಬಯಲು – ಭಾರತ ವಿರುದ್ಧ ಪಾಕ್ ವಿದೇಶಾಂಗ ಸಚಿವರ ಆಘಾತಕಾರಿ ಹೇಳಿಕೆhttps://t.co/pwHJMA5xeL
— Saaksha TV (@SaakshaTv) December 26, 2020