ಉತ್ತಮ ಆರೋಗ್ಯ ಬೇಕಾದ್ರೆ ಸಮತೋಲಿತ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ವಿವಿಧ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿಕೊಳ್ಳಬೇಕು. ಸಂಸ್ಕರಿಸಿದ ಆಹಾರಗಳು, ಸಕ್ಕರೆ ತಿನಿಸುಗಳು ಮತ್ತು ಅತಿಯಾದ ಉಪ್ಪು ಸೇವನೆಯನ್ನು ಮಿತಿಗೊಳಿಸಬೇಕು.
ಹೈಡ್ರೇಟೆಡ್ ಆಗಿರಲು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಸಕ್ಕರೆ ಮತ್ತು ಕೆಫೀನ್ ಹೊಂದಿರುವ ಪಾನೀಯಗಳನ್ನು ಆದಷ್ಟು ಕಡಿಮೆಗೊಳಿಸಿ.
ವಾರದಲ್ಲಿ ಕನಿಷ್ಠ 2 ದಿನ ಚೆನ್ನಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿರಿ.
ದೇಹವು ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಪ್ರತಿದಿನ ರಾತ್ರಿ 7-9 ಗಂಟೆಗಳು ಉತ್ತಮವಾಗಿ ನಿದ್ರೆಗೆ ಮಾಡುವುದನ್ನು ರೂಢಿಸಿಕೊಳ್ಳಿರಿ.
ಧ್ಯಾನ, ಯೋಗಗಳನ್ನು ಅಭ್ಯಾಸ ಮಾಡಿ. ನಿಮ್ಮಿಷ್ಟದ ಹವ್ಯಾಸಗಳು ಅಥವಾ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ಸಹ ಒತ್ತಡವನ್ನು ದೂರಮಾಡುತ್ತದೆ.








