ರಾಜ್ಯದಲ್ಲಿ ಮೂರನೇ ಹಂತದ `ಆಪರೇಷನ್ ಕಮಲ’
ಅಥಣಿ : ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಕಳೆದ ಒಂದು ವರ್ಷದಿಂದ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕೀಯ ನಾಯಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರೋದು ಫ್ಯಾಷನ್ ಆಗಿಬಿಟ್ಟಿದೆ. ಕೇವಲ ರಾಜ್ಯ ಮಟ್ಟದಲ್ಲಿ ಅಲ್ಲದೇ ಸ್ಥಳೀಯ ಮಟ್ಟದ ನಾಯಕರೂ ಕೂಡ ಪಕ್ಷಾಂತರ ಮಾಡುತ್ತಿದ್ದಾರೆ. ಹೀಗಾಗಿ ರಾಜಕೀಯ ಲೆಕ್ಕಾಚಾರಗಳು ಬುಡಮೇಲಾಗುತ್ತಿವೆ.
ರಾಜ್ಯದಲ್ಲಿ ನಡೆದ ಶಿರಾ ಹಾಗೂ ಆರ್ ಆರ್ ನಗರ ಉಪಚುನಾವಣೆ ಸಂದರ್ಭದಲ್ಲಿ ಶಿರಾದಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಮುಖಂಡರು ಸೆಳೆದರೆ, ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿ ಕಮಲ ಹಿಡಿದರು. ಇದೇ ವೇಳೆ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್ ಪಕ್ಷದಿಂದ ಕೆಲವು ಶಾಸಕರು ಬರುತ್ತಾರೆಂದು ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ರಾಜ್ಯದಲ್ಲಿ ಮೂರನೇ ಹಂತದ ಆಪರೇಷನ್ ಕಮಲ ನಡೆಯಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ : ಆರ್.ಆರ್ ನಗರದಲ್ಲಿ ನೀರಸ, ಶಿರಾದಲ್ಲಿ ದಾಖಲೆ ಮತದಾನ: ಶುರುವಾಗಿದೆ ಲೆಕ್ಕಾಚಾರ..!
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಟಳ್ಳಿ, ಕಾಂಗ್ರೆಸ್ ಪಕ್ಷದಿಂದ ಕೆಲವು ಮುಖಂಡರು, ಶಾಸಕರು ಬಿಜೆಪಿಗೆ ಬರುವ ಸಾಧ್ಯತೆಯಿದೆ. ಅವರೆ ಬಹಿರಂಗವಾಗಿ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಮೂರನೇ ಹಂತದ ಆಪರೇಷನ್ ಕಮಲ ನಡೆಯಬಹುದು. ಕಾಂಗ್ರೆಸ್ ಮುಖಂಡರು ಸದ್ಯದಲ್ಲೇ ಬಿಜೆಪಿ ಪಕ್ಷಕ್ಕೆ ಬರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಸುಭದ್ರ : ಆದರೂ ಆಪರೇಷನ್ ಯಾಕೆ..?
ಸದ್ಯ ಅಧಿಕಾರ ಹಿಡಿದಿರುವ ಬಿಜೆಪಿ ಯಾವ ರೀತಿ ಸರ್ಕಾರ ರಚನೆ ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ಅವರ ಚಾಣಾಕ್ಷತೆ ಅಂದರೂ ಪ್ರಜಾಪ್ರಭುತ್ವಕ್ಕೆ ಮಾರಕ. ಆದರೂ ಅಧಿಕಾರದಲ್ಲಿರುವ ಬಿಜೆಪಿಗೆ ಸದ್ಯ ಯಾವುದೇ ತೊಂದರೇ ಇಲ್ಲ. ಅವರಿಗೆ ಯಾವ ಆಪರೇಷನ್ ಮಾಡುವ ಅವಶ್ಯಕತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ನೋಡಿದ್ರೆ ಕುಮಟಳ್ಳಿ ಹೇಳಿಕೆ ರಾಜಕೀಯ ಹೇಳಿಕೆ ಆಗಿರಬಹುದು.. ಆದರೂ ಆಪರೇಷನ್ ಕಮಲ ನಡೆದರೇ ಅದು ಲೋಕಲ್ ಎಲೆಕ್ಷನ್ ಗಾಗಿ ಮಾತ್ರ.
ವಿರಾಜಪೇಟೆ ಪಟ್ಟಣ ಪಂಚಾಯತ್ ಬಿಜೆಪಿ ಮಡಿಲಿಗೆ
ಹೌದು..! ಸದ್ಯದಲ್ಲೇ ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳು ನಡೆಯಲಿವೆ. ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಹಾಗೂ ಲೋಕಪ್ ಫೈಟ್ ನಲ್ಲಿ ಪ್ರಬಲ್ಯ ಸಾಧಿಸುವ ದೃಷ್ಠಿಯಿಂದ ಆಪರೇಷನ್ ಕಮಲ ಮಾಡಬಹುದು. ಆ ಮೂಲಕ ನೆಲೆಯೇ ಇಲ್ಲದ ಪ್ರದೇಶಗಳಲ್ಲಿ ಕೇಸರಿ ಬಾವುಟ ಹರಿಸಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ ಆಗಿರಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel