Swiggy Instamart: ಆನ್ಲೈನ್ ಮೂಲಕ ಅತಿಹೆಚ್ಚು ಕಾಂಡೋಮ್ ಆರ್ಡರ್ ಮಾಡಿದ ನಗರ – ಮುಂಬೈ
ಆನ್ಲೈನ್ ಮೂಲಕ ಅತಿಹೆಚ್ಚು ಕಾಂಡೋಮ್ ಗಳನ್ನ ಆರ್ಡರ್ ಮಾಡುವ ಮೆಟ್ರೋ ನಗರಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ ಎಂದು ಆಹಾರ ಮತ್ತು ದಿನಸಿ ಸಾಮಾಗ್ರಿ ವಿತರಣಾ ವೇದಿಕೆ Swiggy Instamart ತಿಳಿಸಿದೆ.
ಗ್ರಾಹಕರು ಕಳೆದ 12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಕಾಂಡೋಮ್ ಗಳನ್ನ ಆರ್ಡರ್ ಮಾಡಿದ್ದಾರೆ ಎಂದು Swiggy ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಮತ್ತೊಂದು ಉತ್ಪನ್ನವೆಂದರೆ ಮೊಟ್ಟೆ . ಬೆಳಗಿನ ಉಪಾಹಾರದ ಸಮಯದಲ್ಲಿ, ಬೆಂಗಳೂರು ಮತ್ತು ಹೈದರಾಬಾದ್ ಗ್ರಾಹಕರು ಗರಿಷ್ಠ ಸಂಖ್ಯೆಯ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ. ಮತ್ತೊಂದು ಉತ್ಪನ್ನ ಹಾಲು 30 ಮಿಲಿಯನ್ ಆರ್ಡರ್ ಮಾಡಲಾಗಿದೆ.
ಬೆಂಗಳೂರಿನ ಜನತೆ ಸಹ ಸೋಯಾ ಮತ್ತು ಓಟ್ ಹಾಲಿನಂತಹ ಹೆಚ್ಚಿನ ಡೈರಿ ಪರ್ಯಾಯಗಳನ್ನ ಆರ್ಡರ್ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಪೋಹಾ ಮತ್ತು ಉಪ್ಮಾದ ರೆಡಿ-ಟು-ಈಟ್ ಆವೃತ್ತಿಗಳು, ಭಾರತೀಯ ಬ್ರೇಕ್ಫಾಸ್ಟ್ ಕ್ಲಾಸಿಕ್ಗಳು, ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ಊಟದ ವೇಳೆಗೆ ಹೆಚ್ಚು ಆರ್ಡರ್ ಮಾಡಲಾಗಿದೆ.
Swiggy Instamart ನಲ್ಲಿ ಜನಪ್ರಿಯ ಉತ್ಪನ್ನಗಳು
ಕಾಂಡೋಮ್ಗಳು
ಮೊಟ್ಟೆಗಳು
ಸ್ಯಾನಿಟರಿ ನ್ಯಾಪ್ಕಿನ್ಸ್
ಟ್ಯಾಂಪೂನ್ಗಳು
ತ್ವರಿತ-ವಾಣಿಜ್ಯ ಸೇವೆ Instamart ಕಳೆದ ವರ್ಷದಲ್ಲಿ 16 ಪಟ್ಟು ಬೆಳೆದಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈನಲ್ಲಿರುವ ಗ್ರಾಹಕರು ಆ್ಯಪ್ನ ಅತಿದೊಡ್ಡ ಬಳಕೆದಾರರಾಗಿದ್ದಾರೆ.








