ಬ್ಯಾಟ್… ಕಾನ್ಫಿಡೆನ್ಸ್… ನಾಟ್ ಟುಡೇಯ ಹಿಂದಿನ ಸಿಕ್ರೇಟ್ ಏನು ? ಧೋನಿಯ ವ್ಯಕ್ತಿತ್ವಕ್ಕೆ ಫಿದಾ ಆಗಿರುವ ಪಕ್ಕದ ದೇಶದ ಕ್ರಿಕೆಟಿಗ ಯಾರು ?
ಆಯ್ತು… ನಾನು ನಿನಗೆ ಬ್ಯಾಟ್ ಕೊಡುತ್ತೇನೆ. ಆದ್ರೆ ಆ ಬ್ಯಾಟ್ ನಲ್ಲಿ ನೀನು ಭಾರತದ ಪರ ಆಡಬಾರದು… ಹೀಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಹೇಳಿದ್ದು ಯಾರಿಗೆ ಗೊತ್ತಾ ? ಈ ವಿಚಾರವನ್ನು ಬಹಿರಂಗ ಪಡಿಸಿದ್ದ ಆಟಗಾರ ಯಾರು ? ಧೋನಿ ಸಿಡಿಸುವ ಸಿಕ್ಸರ್‌ನ ಯಶಸ್ಸಿನ ಸಿಕ್ರೇಟ್ ಏನು ಎಂಬುದನ್ನು ತಿಳಿದುಕೊಂಡ ಆಟಗಾರ ಯಾರೀರಬಹುದು..
ಹೌದು, ಈ ಆಟಗಾರ ಬೇರಾರು ಅಲ್ಲ.. ಬಾಂಗ್ಲಾದೇಶದ ಸಬ್ಬೀರ್ ರಹಮಾನ್. ಸಬ್ಬೀರ್ ಧೋನಿಯ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊoಡಿದ್ದಾರೆ. ಟಿ-ಟ್ವೆಂಟಿ ವಿಶ್ವಕಪ್ ನ ಬೆಂಗಳೂರಿನ ಪಂದ್ಯದಲ್ಲಿ ಧೋನಿ ಸಬ್ಬೀರ್ ರೆಹಮಾನ್ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಅದೇ ರೀತಿ ಕಳೆದ ವರ್ಷ ಇಂಗ್ಲೆ0ಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದ ವೇಳೆಯಲ್ಲೂ ಸಬ್ಬೀರ್ ರೆಹಮಾನ್ ಅವರನ್ನು ಸ್ಟಂಪ್ ಔಟ್ ಮಾಡಲು ಪ್ರಯತ್ನ ಮಾಡಿದ್ದರು. ಆದ್ರೆ ಧೋನಿಯ ಚಾಣಕ್ಯ ತಂತ್ರವನ್ನು ತಕ್ಷಣವೇ ಅರಿತುಕೊಂಡ ಸಬ್ಬೀರ್ ಸೇಫ್ ಆಗಿದ್ದರು. ಅಲ್ಲದೆ ಧೋನಿಗೆ ನಾಟ್ ಟುಡೇ ಅಂತ ಹೇಳಿದ್ದರಂತೆ.
ಅದೇ ರೀತಿ ಸಬ್ಬೀರ್ ರೆಹಮಾನ್‌ಗೆ ಧೋನಿ ಬಗ್ಗೆ ಅಪಾರ ಗೌರವ ಇದೆ. ಧೋನಿ ಬಲವಾದ ಸಿಕ್ಸರ್‌ಗಳನ್ನು ಹೊಡೆಯುತ್ತಿರುವುದನ್ನು ನೋಡಿರುವ ಸಬ್ಬೀರ್, ಒಂದು ದಿನ ಧೋನಿಯ ಬಳಿ ಒಂದು ನೇರ ಪ್ರಶ್ನೆಗಳನ್ನು ಕೇಳಿದ್ರಂತೆ. ನೀವು ಬಲವಾಗಿ ಸಿಕ್ಸರ್‌ಗಳನ್ನು ಹೊಡೆಯುತ್ತೀರಿ. ಆದ್ರೆ ಆ ರೀತಿ ನಮ್ಮಿಂದ ಆಗುತ್ತಿಲ್ಲ. ನಿಮ್ಮ ಯಶಸ್ಸಿನ ಹಿಂದಿನ ಸಿಕ್ರೇಟ್ ಏನು ಅಂತ. ಅದಕ್ಕೆ ಧೋನಿಯ ಉತ್ತರ ಒಂದೇ ಪದದಲ್ಲಿ ಇತ್ತಂತೆ. ಅದುವೇ ಆತ್ಮವಿಶ್ವಾಸ ಅಂತ ಧೋನಿ ಸಬ್ಬೀರ್‌ಗೆ ಹೇಳಿದ್ರಂತೆ.
ಇನ್ನೊಂದು ಬಾರಿ ಧೋನಿಯ ಬಳಿ ನಿಮ್ಮ ಬ್ಯಾಟ್ ನನಗೆ ಕೊಡುತ್ತೀರಾ ಅಂತ ಸಬ್ಬೀರ್ ಕೇಳಿದ್ರಂತೆ. ಅದಕ್ಕೆ ಧೋನಿ, ನಾನು ನಿನಗೆ ಬ್ಯಾಟ್ ಕೊಡುತ್ತೇನೆ. ಆದ್ರೆ ಆ ಬ್ಯಾಟ್ ನಲ್ಲಿ ನೀನು ಭಾರತದ ವಿರುದ್ಧ ಆಡಬಾರದು ಎಂದು ಹೇಳಿದ್ರಂತೆ.








