ವಿಜಯಪುರ: ನಾವು ಆರಂಭದಿಂದಲೂ 2ಎ ಮೀಸಲಾತಿ ಕೇಳಿಲ್ಲ. ಇದು ಕಾಂಗ್ರೆಸ್ ನ ಮಾಜಿ ಶಾಸಕ ಮಾಡಿದ ಅವಾಂತರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆರಂಭದಿಂದಲೂ 2ಎ ಮೀಸಲಾತಿ ಕೇಳಿಲ್ಲ. ಕಾಂಗ್ರೆಸ್ ನ ಮಾಜಿ ಶಾಸಕ, ಈಗ ಹಾಲಿ ಶಾಸಕ ಕೇಳಿದ್ದ. 2ಎ ದಲ್ಲಿ ಹೋದರೆ ಹಲವು ಸಮುದಾಯದಕ್ಕೆ ಅನ್ಯಾಯ ಆಗುತ್ತದೆ. ಮುಸ್ಲಿಂರಿಗೆ ನೀಡಿದ ಮೀಸಲಾತಿ ಆಸಂವಿಧಾನಿಕವಾಗಿದೆ. ಶೇ. 7ನಲ್ಲಿ ನಾವು ಹಂಚಿಕೊಂಡು ತಿನ್ನುತ್ತೇವೆ ಎಂದು ಹೇಳಿದ್ದೇವೆ. ನಾವು 2ಎನಲ್ಲಿ ಮೀಸಲಾತಿ ಕೇಳುವುದಿಲ್ಲ. ಕಾಂಗ್ರೆಸ್ ಮಾಜಿ ಶಾಸಕ ಮಾಡಿದ ಅವಾಂತರ ಇದು. ಕಾಂಗ್ರೆಸ್ ಮಾಡಿದ ಕೆಲಸ ಇದಾಗಿದೆ. 2ಎ ದಲ್ಲಿ ಮೀಸಲಾತಿ ಕೇಳಿ ಕೈ-ಕಾಲು ಹಿಡಿಯುವುದು ಬೇಡ. ಬೇರೆ ಸಮುದಾಯದಕ್ಕೆ ನೀಡಿದ ಅಸಂವಿಧಾನಿಕ ಮೀಸಲಾತಿಯಲ್ಲಿ ನೀಡಲ್ಲ ಎಂದಿದ್ದಾರೆ.








