ಕೋವಿಡ್ -19 ಹರಡುವಿಕೆ ತಡೆಯಲು ಲಾಕ್ ಡೌನ್ ಬಿಟ್ಟರೇ ಬೇರೆ ಯಾವುದೇ ದಾರಿ ಇರಲಿಲ್ಲ. ಹಾಗಾಗಿ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ದೇಶ ಇಂದು ನಿರ್ಣಾಯಕ ಎರಡು ವಾರಗಳ ಅವಧಿಯನ್ನು ಪ್ರವೇಶಿಸಿದೆ ಎಂದು ಕಾಂಗ್ರಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ. ರವಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಪಕ್ಷ ನಾಯಕರಿಗೆ ದೂರವಾಣಿ ಕರೆ ಮಾತನಾಡಿದ ಬಳಿಕ ಚಿದಂಬರಂ ಸರಣಿ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಪಿಎಂ ಮೋದಿ ಜೊತೆ ಮಾತನಾಡಿದ್ದನ್ನು ಉಲ್ಲೇಖಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಜಿ ಕೇಂದ್ರ ಸಚಿವ ಚಿದಂಬರಂ ಭಾರತದಲ್ಲಿ 4,000ಕ್ಕೂ ಅಧಿಕ ಜನರನ್ನು ಕೊರೊಮಾ ಕಾಡುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮದ ಕುರಿತು ಟ್ವೀಟರ್ ನಲ್ಲಿ ಬರೆದಿದ್ದಾರೆ. ಭಾರತ ಇಂದು ನಿರ್ಣಾಯಕ ಎರಡು ವಾರಗಳ ಅವಧಿಯನ್ನು ಪ್ರವೇಶಿಸಿದೆ. ಪ್ರಧಾನಿ ಮೋದಿ ವಿಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದು ಒಳ್ಳೆಯ ಬೆಳವಣಿಗೆ. ಕೊರೊನಾ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರಕ್ಕೆ ನಾವು ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಹಾಗೂ ವಿಪಕ್ಷಗಳು ಸರ್ಕಾರದ ನ್ಯೂನತೆ ಗುರುತಿಸಿದರೇ ಅದು ರಚನಾತ್ಮಕ ಟೀಕೆ ಮತ್ತು ಸಹಕಾರದ ಮನೋಭಾವದಲ್ಲಿರುತ್ತದೆ. ಎಪ್ರಿಲ್ 2 ರಂದು ನಡೆದ ಸಿಡಬ್ಲುಸಿ ನಿರ್ಣಯದಲ್ಲಿ ಇಂತಹ ಅಂಶವನ್ನು ಎತ್ತಲಾಗಿದೆ. ವಿಶ್ವದಾದ್ಯಂತ ಕೊರೊನಾ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯಬೇಕಾದರೆ ಆಕ್ರಮಣಕಾರಿ ಪರೀಕ್ಷೆ ತುಂಬ ಅಗತ್ಯವಾಗಿ ಬೇಕಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು, ವೈದ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಒಗ್ಗಟ್ಟಾಗಿ ಕ್ಷಿಪ್ರಗತಿಯಲ್ಲಿ ವ್ಯಾಪಕ ಪರೀಕ್ಷೆ ನಡೆಸಬೇಕು. ಇಂದು ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಪಿ.ಚಿದಂಬರಂ ಹೇಳಿದ್ದಾರೆ








