ಕುರುವಂಶದ ಅಂತ್ಯಕ್ಕೆ ನಾಂದಿ ಹಾಡಿ ಕುರುಕ್ಷೇತ್ರಕ್ಕೆ ಕಾರಣವಾದ ದ್ರುಪದನ ಮಗಳು, ಪಾಂಡವರ ಪತ್ನಿ, ಅಗ್ನಿಯಿಂದ ಜನ್ಮಿಸಿದ ಯಾಜ್ಞಸೇನಿ, ಹಸ್ತಿನಾಪುರದ ಸಾಮ್ರಾಜ್ಞಿ ದ್ರೌಪದಿ.ಆದ್ರೆ ಮಹಾಭಾರತದ ಪಾಂಚಾಲಿಯ ಬಗ್ಗೆ ಪರಿಚಯ ನೀಡುವ ಅಗತ್ಯವಿಲ್ಲ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿ ಅತ್ಯಂತ ಜನಮನ್ನಣೆ ಗಳಿಸಿರುವ ಮಹಾಭಾರತದಲ್ಲಿರುವ ದ್ರೌಪದಿಯ ನಿಜಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ. ತುಂಬಿದ ಸಭೆಯಲ್ಲಿ ಅವಮಾನಿತಳಾದ ಪ್ರತೀಕಾರವಾಗಿ ದುಶ್ಯಾಸನನ ರಕ್ತದಿಂದ ಕೇಶ ತೊಳೆದುಕೊಂಡು, ದುರ್ಯೋಧನನ ತೊಡೆ ಮುರಿಯುವ ಪಣ ತೊಟ್ಟು ಕುರುಕ್ಷೇತ್ರಕ್ಕೆ ಕಾರಣಳಾದ ದ್ರೌಪದಿ ಪಾತ್ರಧಾರಿಯ ನಿಜವಾದ ಹೆಸರು ಪೂಜಾ ಶರ್ಮ. ಮಹಾಭಾರತದ ಪಾಂಚಾಲಿ ಪಾತ್ರಧಾರಿ ಪೂಜಾ ಶರ್ಮಾ ಅವರ ಲೈಫ್ ಜರ್ನಿ ಹೇಗಿದೆ ಗೊತ್ತಾ…?
ಬಾಲ್ಯ ಮತ್ತು ವಿದ್ಯಾಭ್ಯಾಸ
ಪೂಜಾ ಶರ್ಮಾ ಮೂಲತಃ ದೆಹಲಿಯವರು. ಜುಲೈ 12 1989ರಲ್ಲಿ ಜನಿಸಿದ ಪೂಜಾ ದೆಹಲಿಯಲ್ಲೇ ತಮ್ಮ ವಿಧ್ಯಾಭ್ಯಾಸ ಮುಗಿಸಿಕೊಂಡಿದ್ದಾರೆ. ಇವರ ತಂದೆ ಹೆಸರು ಸುರೇಶ್ ಶರ್ಮಾ. ಪೂಜಾ ದೆಹಲಿ ವಿಶ್ವವಿದ್ಯಾಲಯಲ್ಲಿ ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ತಮ್ಮ ಪರಿವಾರದೊಂದಿಗೆ ವಾಸವಾಗಿದ್ದಾರೆ.
ಮಾಡಲಿಂಗ್ , ಆಕ್ಟಿಂಗ್
ಪೂಜಾ ತಮ್ಮ ಕಾಲೇಜಿನ ದಿನಗಳಲ್ಲೇ ಅನೇಕ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ತಮ್ಮ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಮಾಡಲಿಂಗ್ ಶುರು ಮಾಡಿದ ಪೂಜಾ ಹಲವಾರು ಆಡ್ ಗಳನ್ನ ಮಾಡಿದ್ದಾರೆ. ಇದರ ಜೊತೆಗೆ ಪೂಜಾ ಝೂಂ ಹಾಗೂ ಡಿಡಿ ನ್ಯಾಷನಲ್ ನ ಪ್ರಸಿದ್ಧ ಟಿವಿ ಶೋಗಳಲ್ಲಿ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ಪೂಜಾ ತೇರಿ ಮೇರಿ ಲವ್ ಸ್ಟೋರೀಸ್ ಶೋ ನಲ್ಲಿ ಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಾರೆ. 
ಸ್ಟಾರ್ ಪಟ್ಟ
ಪೂಜಾ ಶರ್ಮಾಗೆ ದೊಡ್ಡ ಟರ್ನಿಂಗ್ ಪಾಯಿಂಟ್ ತಂದುಕೊಟ್ಟ ಧಾರಾವಾಹಿ ಅಂದ್ರೆ ಅದೇ 2013ರಲ್ಲಿ ತೆರೆಕಂಡ ಮಹಾಭಾರತ. ಮೈಥಾಲಾಜಿಕಲ್ ಪಾತ್ರದ ಮೂಲಕ ಮುಖ್ಯಭೂಮಿಕೆಯಲ್ಲಿ ನಡಿಸುವ ಅವಕಾಶ ಗಿಟ್ಟಿಸಿಕೊಂಡ ಪೂಜಾಗೆ ದ್ರೌಪದಿ ಹೇಳಿಮಾಡಿಸಿದ ಪಾತ್ರ ಎಂದ್ರೂ ತಪ್ಪಾಗೋದಿಲ್ಲ. ಅವರನ್ನ ಬಿಟ್ರೆ ಬೇರೆ ಯಾರೂ ಈ ಪಾತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಜನಮನದಲ್ಲಿ ಬೀಡುಬಿಟ್ಟಿದೆ. ಪೂಜಾ ಮಹಾಭಾರತದ ಬಳಿಕ ಬೇರೆ ಶೋಗಳಲ್ಲಿ ಕಾಣಿಸಿಕೊಂಡರೂ ಯಾವುದು ಅಷ್ಟರ ಮಟ್ಟಿಗೆ ಜನರ ಮನಸ್ಸಿಗೆ ಹತ್ತಿರವಾಗಲಿಲ್ಲ. ಆದ್ರೆ 2017 ರಿಂದ 2018ರವರೆಗೂ ತೆರೆಕಂಡ ಮಹಾಕಾಳಿ ಅಂತ್ಯವೇ ಆರಂಭದಲ್ಲಿ ಸೌಮ್ಯ ಸ್ವಭಾವಿನಿ, ಶಿವನ ಅರ್ಧಾಂಗಿನಿ ಪಾರ್ವತಿಯಾಗಿ, ದುಷ್ಟರ ಅಂತ್ಯಕ್ಕೆ ಭೀಭತ್ಸ ರೂಪಧಾರಿಣಿ ಮಹಾಕಾಳಿಯ ಅವತಾರದಲ್ಲಿ ನಟಿಸಿದ ಪೂಜಾರ ನಟನೆ ನಿಜಕ್ಕೂ ಅದ್ಭುತವೇ ಸರಿ. ಅವರ ಮಹಾಕಾಳಿಯ ರೂಪವನ್ನ ನೆನೆದರೆ ಒಂದು ಕ್ಷಣ ನಡುಕ ಹುಟ್ಟಿಸುತ್ತೆ. ಅದರ ಜೊತೆಜೊತೆಗೆ ಮಾತೃ ಹೃದಯಿ ಪಾರ್ವತಿಯ ಸೌಮ್ಯತೆಯೂ ಜನರ ಮನಸ್ಸಿಗೆ ನಾಟುವಂತ್ತಿತ್ತು. ಅವರಾ ರಂಗ ಬದುಕಿನಲ್ಲಿ ಮಹಾಭಾರತದ ನಂತರ ಮಹಾಕಾಳಿಯ ಪಾತ್ರವೂ ಅವರನ್ನ ಅತ್ಯಂತ ಜನಪ್ರಿಯವಾಗುವಂತೆ ಮಾಡಿತ್ತು.
ಇದರ ಹೊರತಾಗಿ ಪೂಜಾ ಶರ್ಮಾ ಅವರು ಕರ್ಮಪಾಲ ದಾತ ಶನಿ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ಮೈಥಾಲಾಜಿಕಲ್ ಧಾರವಾಹಿಯಿಂದಲೇ ಪೂಜಾ ಶರ್ಮಾ ಹೆಚ್ಚು ಫೇಮಸ್ ಆಗಿ ಇಂತಹ ಪಾತ್ರಗಳಲ್ಲೇ ಜನರ ಫೇವರೇಟ್ ಆಗಿದ್ಧಾರೆ.








