ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧನ : ದೇಶ ತೊರೆದು ‘ಭಾರತ , ಅಮೆರಿಕಾಗೆ ಹೋಗಬಹುದು ’ – ಫಿಲಿಫೈನ್ಸ್ ಅಧ್ಯಕ್ಷ
ಫಿಲಿಫೈನ್ಸ್ : ಫಿಲೀಫೈನ್ಸ್ ಕೋವಿಡ್ 2ನೇ ಅಲೆ ಮಾರಕವಾಗಲಿರುವುದಾಗಿ ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಫಿಲಿಪ್ಪೀನ್ಸ್ ಅನೇಕ ಕ್ರಮಗಳನ್ನ ಕೈಗೊಳ್ತಿದೆ. ಈ ನಡುವೆ ಲಸಿಕೆ ನೀಡುವಿಕೆಯನ್ನೂ ಹೆಚ್ಚಿಸಲಾಗ್ತಿದೆ.. ಆದ್ರೆ ಅನೇಕರು ಲಸಿಕೆ ಪಡೆಯದೇ ಹಿಂದೇಟು ಹಾಕ್ತಿದ್ದು, ಅಂತಹವರಿಗೆ ಇದೀಗ ಅಲ್ಲಿನ ಸರ್ಕಾರ ಶಾಕ್ ಕೊಟ್ಟಿದೆ..
ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಅವರು, ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಫಿಲಿಪಿನೋಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಲಸಿಕೆ ಹಾಕಿಸಿಕೊಳ್ಳದವರು ದೇಶ ತೊರೆಯಲು ಸೂಚಿಸಿರುವ ಅವರು, ಭಾರತ, ಅಮೆರಿಕ ಅಥವಾ ನಿಮಗೆ ಬೇಕಾದ ಕಡೆಗೆ ಹೋಗಬಹುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
‘ದೇಶವು ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ದೇಶದಲ್ಲಿ ಕೊರೊನಾ ವೈರಸ್ ಇರುವುದರಿಂದ ನಾವು ನಮ್ಮ ಪ್ರಯತ್ನಗಳನ್ನು ಮೂರು ಪಟ್ಟು ಹೆಚ್ಚಿಸಬೇಕು’ ಎಂದು ಡುಟರ್ಟೆ ಹೇಳಿರುವುದಾಗಿ ಮನಿಲಾದ ಮಾಧ್ಯಮ ವರದಿಗಳು ತಿಳಿಸಿವೆ.
ಅಲ್ಲದೇ ‘ನನ್ನನ್ನು ತಪ್ಪಾಗಿ ಭಾವಿಸಬೇಡಿ. ಈ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯೂ ಇದೆ. ನೀವು ಲಸಿಕೆ ಪಡೆಯಲು ಬಯಸದಿದ್ದರೆ, ನಾನು ನಿಮ್ಮನ್ನು ಬಂಧಿಸುವೆ. ಅಲ್ಲದೆ ನಿಮ್ಮ ರಟ್ಟೆಗೆ ನಾನೇ ಲಸಿಕೆ ಚುಚ್ಚುತ್ತೇನೆ. ನೀವು ಕೀಟಗಳಿದ್ದಂತೆ. ನಾವು ಈಗಾಗಲೇ ತೊಂದರೆಯಲ್ಲಿದ್ದು, ನೀವು ಅದರ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದ್ದೀರಿ’ ಎಂದು ಡುಟರ್ಟೆ ಹೇಳಿರುವುದಾಗಿ ವರದಿಯಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








