ದಾವಣಗೆರೆ: ಬಿಜೆಪಿ (BJP)ಕೊರೊನಾ ಸಂದರ್ಭದಲ್ಲಿ ಸಾವಿನ ಶವದ ಮೇಲೆ ಸಾವಿರಾರು ಕೋಟಿ ಲೂಟಿ ಮಾಡಿದೆ. ನಮ್ಮ ಪಕ್ಷದ ವಿರುದ್ಧ ಮಾತನಾಡುವ ನೈತಿಕತೆ ಆ ಪಕ್ಷಕ್ಕಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ (Covid-19 Scam) ಕಾಲದಲ್ಲಿ ಯಂತ್ರೋಪಕರಣಗಳನ್ನು ಖರೀದಿ ಮಾಡದೇ ಹಣ ತಿಂದು ಹಾಕಿದ್ದಾರೆ. ಬಿಜೆಪಿ ಮಾಡಿದ ಅವ್ಯವಹಾರ ಈಗ ಬೆಳಕಿಗೆ ಬರುತ್ತಿವೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೊರೊನಾ ಲಸಿಕೆಯನ್ನು ಎಲ್ಲರಿಗೂ ಕೊಡಲು ಆಗಲಿಲ್ಲ. ನಾವು ನಮ್ಮ ಕುಟುಂಬದಿಂದ 6 ಕೋಟಿ ರೂ. ವೆಚ್ಚದಲ್ಲಿ ಕೋವಿಡ್ ಲಸಿಕೆ ವಿತರಿಸಿದ್ದೆವು. ಇದೇ ಕಾರಣಕ್ಕೆ 40% ಭ್ರಷ್ಟಚಾರ ಎಂದು ನಾವು ಬಿಜೆಪಿ ಸರ್ಕಾರದ ಮೇಲೆ ಆರೋಪಿಸಿದ್ದೇವು ಎಂದು ಗುಡುಗಿದ್ದಾರೆ.