ಸಂಕ್ರಾಂತಿಯಂದು ಮೂರು ಕಣ್ಣಿನ ವಿಚಿತ್ರ ಕರು ಜನನ
ರಾಯ್ಪುರ : ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರುವಿಗೆ ಹಸುವೊಂದು ಮಕರ ಸಂಕ್ರಾಂತಿ ಜನನ ನೀಡಿದೆ.
ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ಈ ವಿಚಿತ್ರ ಕರು ಜನಿಸಿದೆ. ರೈತ ಹೆಮಂತ್ ಚಂದೇಲ್ ಅವರು ಜರ್ಸಿ ಹಸುವನ್ನು ಸಾಕಿದ್ದಾರೆ.
ಈ ಹಸು ಸಂಕ್ರಾಂತಿ ಹಬ್ಬದಂದು ಕರುವಿಗೆ ಜನ್ಮ ನೀಡಿದ್ದು, ಅದು ಎರಡು ಕಣ್ಣು, ಮತ್ತು ಮೂಗಿನ ನಾಲ್ಕು ರಂಧ್ರಗಳನ್ನು ಹೊಂದಿದೆ.
ಕರುವಿಗೆ ಎರಡು ಕಣ್ಣುಗಳ ಮಧ್ಯೆ ಹಣೆಯ ಮೇಲೆ ಮೂರನೇಕಣ್ಣಿದೆ. ಎರಡು ಮೂಗಿನ ರಂಧ್ರಗಳ ಬದಲಿಗೆ 4 ರಂಧ್ರಗಳನ್ನು ಹೊಂದಿದೆ.
ಇನ್ನು ಈ ವಿಚಿತ್ರ ಕರು ಜನನದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ದೂರದ ಊರಿನಿಂದ ಜನರು ಆಗಮಿಸಿ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.
ಎಲ್ಲರೂ ಕರುವಿಗೆ ಹೂವಿನ ಮಾಲೆ ಹಾಕಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ.
ಮತ್ತೊಂದೆಡೆ ಪಶು ವೈದ್ಯರು ಕರು ಸರಿಯಾಗಿ ಬೆಳವಣಿಗೆಯಾಗದ ಕಾರಣ ಹೀಗೆ ಜನಿಸಿದೆ ಎನ್ನುತ್ತಿದ್ದಾರೆ.









