ಕಾಲುವೆಗೆ ಉರುಳಿ ಬಿದ್ದ ಆಟೋ ಮೂವರ ಸಾವು…
ಕಾಲುವೆಗೆ ಆಟೋ ಬಿದ್ದ ಪರಿಣಾಮ ಆಟೋದಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಕೊಳಗಲ್ ಗಾಮದಲ್ಲಿ ತುಂಗಭದ್ರ ಕೆನಾಲ್ಗೆ 15 ರಿಂದ 20 ಜನರಿದ್ದ ಪ್ಯಾಸೆಂಜರ್ ಆಟೋ ಉರುಳಿ ಬಿದ್ದಿದೆ. ಗ್ರಾಮದ ತುಂಗಾಭದ್ರ ಕೆನಾಲ್ ಮೇಲೆ ಸಂಚರಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ಯಾಸೆಂಜರ್ ಆಟೋ ಕಾಲುವೆಗೆ ಉರುಳಿ ಬಿದ್ದಿದೆ. ಒಬ್ಬ ಪ್ರಯಾಣಿಕ ಈಜಿ ದಡ ಸೇರಿದ್ದಾನೆ.
ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಮತ್ತು ಅಗ್ನಿ ಶಾಮಕ ದಳ ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಶೋಧ ಕಾರ್ಯ ಕೈಗೊಂಡಿದ್ದಾರೆ. ಕಾಲುವೆ ತುಂಬಿ ಹರಿಯುತ್ತಿರುವ ಪರಿಣಾಮ ರಕ್ಷಣಾ ಕಾರ್ಯಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
ಜೆಸಿಬಿ ಬಳಸಿ ರಕ್ಷಣೆ ಮಾಡುತ್ತಿದ್ದಾರೆ.