ಧಾರವಾಡ: ಕಂಪನಿಯಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಪತ್ನಿ-ಪುತ್ರಿಗೆ ವಿಷ ನೀಡಿದ ವ್ಯಕ್ತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಮೆಹಬೂಬ್ ನಗರದ ಮನೆಯೊಂದರಲ್ಲಿ ಮೌನೇಶ್ ಪತ್ತಾರ(36), ಆತನ ಪತ್ನಿ ಹಾಗೂ ಎರಡು ವರ್ಷದ ಪುತ್ರಿ ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಗದಗ್ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದವರಾದ ಮೌನೇಶ್ ಪತ್ತಾರ, ಧಾರವಾಡದ ಮಾರ್ಕೋಪೋಲೋ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕಂಪನಿಯಲ್ಲಿ 50ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಎಲ್ಲಿ ತನಗೂ ಕೊರೊನಾ ಬಂದು ಉದ್ಯೋಗ ಕಳೆದುಕೊಳ್ಳುತ್ತೇನೋ ಎಂಬ ಭೀತಿಯಿಂದ ಪತ್ನಿ ಹಾಗೂ ಮಗಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Á
ಟ್ರಂಪ್ ಜೊತೆ ಮಾತುಕತೆ ಇಲ್ಲ: IRGC ಕಠಿಣ ಎಚ್ಚರಿಕೆ
ಒಂದು ಕಡೆ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಮಾಧ್ಯಮಗಳು ಶಾಂತಿ ಮಾತುಕತೆಗಳ ಬಗ್ಗೆ ಹೇಳುತ್ತಿದ್ದರೆ, ಇನ್ನೊಂದು ಕಡೆ ಇಸ್ಲಾಮಿಕ್ ರೆವ್ಯೂಲೇಷನರಿ ಗಾರ್ಡ್ ಕಾರ್ಪ್ಸ್ (IRGC) ಇದನ್ನು ಸಂಪೂರ್ಣವಾಗಿ...








