ರಾಜ್ಯದಲ್ಲಿ ಇನ್ನೂ ಮೂರು ದಿನ ಚಳಿ ಹೆಚ್ಚಾಗಲಿದೆ : ಹವಾಮಾನ ಇಲಾಖೆ cold weather saaksha tv
ಬೆಂಗಳೂರು : ಕಳೆದ ಕೆಲ ದಿನಗಳ ಹಿಂದೆ ಅಕಾಲಿಕ ಮಳೆಗೆ ಕಂಗಾಲಾಗಿದ್ದ ಕರುನಾಡಿಗರು, ಇದೀಗ ವಿಪರೀತ ಚಳಿಗೆ ನಡುಗುತ್ತಿದ್ದಾರೆ.
ಸದ್ಯ ರಾಜ್ಯದೆಲ್ಲೆಡೆ ಶೀತಗಾಳಿ ಬೀಸುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ವಿಪರೀತ ಚಳಿ ಇದೆ. ಮುಖ್ಯವಾಗಿ ಸದಾ ಬೇಸಿಗೆಯಂತೆ ವಾತಾವರಣ ಇರುವ ಉತ್ತರ ಕರ್ನಾಟಕದಲ್ಲೂ ಚಳಿ ಹೆಚ್ಚಾಗಿದೆ.
ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಚಳಿ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಚಳಿ ದುಪ್ಪಟ್ಟಾಗಲಿದೆಯಂತೆ.









