ಮೈಸೂರು : ಒಂದೇ ಕುಟುಂಬದ ಮೂವರು ನೀರಿಗೆ ಬಲಿಯಾಗಿರುವ ಘಟನೆ ನಡೆದಿದೆ.
ನಾಲೆಗೆ ಬಿದ್ದ ಪುತ್ರಿಯನ್ನು (Daughter) ರಕ್ಷಿಸಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಜಿಲ್ಲೆಯ ಹೆಚ್.ಡಿ.ಕೋಟೆ (HD Kote) ತಾಲೂಕಿನ ಚಂಗೌಡನಹಳ್ಳಿಯಲ್ಲಿ ನಡೆದಿದೆ.
ಅಪ್ಪ ಮಹಮ್ಮದ್ ಕಪೀಲ್ (42), ಅಮ್ಮ ಶಾವರ ಭಾನು (35), ಪುತ್ರಿ ಶಾಹೀರಾ ಭಾನು (20) ಸಾವನ್ನಪ್ಪಿದ ದುರ್ದೈವಿಗಳು. ಓರ್ವ ಮಗಳು ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದಳು. ಕೂಡಲೇ ಅಪ್ಪ, ಅಮ್ಮ ಕಾಪಾಡಲು ಹೋಗಿದ್ದಾರೆ. ಆಗ ಮೂವರೂ ನೀರು ಪಾಲಾಗಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮೂವರ ಮೃತ ದೇಹ ಹೊರ ತೆಗೆದಿದ್ದಾರೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.