ಮುಂಬಯಿ: ಸಿಗ್ನಲಿಂಗ್ ಕೆಲಸದ ಸಂದರ್ಭದಲ್ಲಿ ರೈಲಿಗೆ ಸಿಲುಕಿ ಮೂವರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಾಲ್ಘರ್ (Palghar)ಜಿಲ್ಲೆಯ ವಸೈ ಹತ್ತಿರ ಈ ದುರ್ಘಟನೆ ನಡೆದಿದೆ. ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ ಆರ್ಥಿಕ ಪರಿಹಾರ ಘೋಷಿಸಿದೆ. ಪಶ್ಚಿಮ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿ ಸಿಗ್ನಲಿಂಗ್ ಪಾಯಿಂಟ್ ಸಮಸ್ಯೆ (signalling work) ಸರಿಪಡಿಸಲು ವಸೈಗೆ ಹೋಗಿದ್ದರು ಎನ್ನಲಾಗಿದೆ.
ವಸೈ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ಮಧ್ಯೆ ರಾತ್ರಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ವಾಸು ಮಿತ್ರ, ಸೋಮನಾಥ್ ಉತ್ತಮ್ ಲಾಂಬುಟ್ರೆ ಮತ್ತು ಸಚಿನ್ ವಾಂಖೆಡೆ ಸಾವನ್ನಪ್ಪಿದ ದುರ್ದೈವಿಗಳು. ಈ ಮೂವರು ಸಿಗ್ನಲಿಂಗ್ ವಿಭಾಗದವರು ಎನ್ನಲಾಗಿದೆ.