ಚೆನ್ನೈ: ಕಲುಷಿತ ನೀರು ಸೇವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಯಲ್ಲಿ 20ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಈ ಘಟನೆ ಚೆನ್ನೈ (Chennai) ಹತ್ತಿರದ ಪಲ್ಲಾವರಂ (Pallavaram) ಎಂಬಲ್ಲಿ ನಡೆದಿದೆ. ತಿರುವೀತಿ (56), ಮೋಹನರಂಗಂ (42), ವರಲಕ್ಷ್ಮಿ (88) ಸಾವನ್ನಪ್ಪಿರುವ ದುರ್ದೈವಿಗಳು.
ಫೆಂಗಲ್ ಚಂಡಮಾರುತದಿಂದಾಗಿ ಇತ್ತೀಚೆಗೆ ಪಲ್ಲಾವರಂನಲ್ಲಿ ವ್ಯಾಪಕ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಳಚೆ ನೀರು ಮತ್ತು ಕುಡಿಯುವ ನೀರು ಮಿಶ್ರಣವಾಗಿ ಕಲುಷಿತಗೊಂಡಿದೆ. ಆದರೆ, ಅದೇ ನೀರನ್ನು ಜನರು ಕುಡಿದಿದ್ದರು. ಹೀಗಾಗಿ ಅಸ್ವಸ್ಥರಾಗಿದ್ದಾರೆ.
ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ (Ma.Subramanian) ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.