ಭದ್ರತಾ ಪಡೆ ಮೂರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ.ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸಹ ಕೂಡ ಕರ್ತವ್ಯದಲ್ಲಿ ಹುತಾತ್ಮರಾಗಿದ್ದಾರೆ.
ಶ್ರೀನಗರ: ಶ್ರೀನಗರದ ಪಂಥಾ ಚೌಕ್ನಲ್ಲಿ 3 ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಕೊಂದಿದೆ. ಈ ಎನ್ಕೌಂಟರ್ ಕಳೆದ ರಾತ್ರಿ ಪ್ರಾರಂಭವಾಗಿದ್ದು ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸಹ ಕೂಡ ಕರ್ತವ್ಯದಲ್ಲಿ ಹುತಾತ್ಮರಾಗಿದ್ದಾರೆ.
ವರದಿ ಪ್ರಕಾರ ಶ್ರೀನಗರದ ಹೊರವಲಯದಲ್ಲಿರುವ ಪಂಥಾ ಚೌಕ್ನಲ್ಲಿರುವ ಸಿಆರ್ಪಿಎಫ್ ನಾಕಾದ ಮೇಲೆ 3 ಉಗ್ರರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ತಕ್ಷಣವೇ ಪ್ರತಿ ದಾಳಿ ಪ್ರಾರಂಭಿಸಿ ಉಗ್ರರನ್ನು ಒಂದೇ ಕಡೆ ಸೇರಿಸಲಾಯಿತು. ರಾತ್ರಿಯ ಸುದೀರ್ಘ ಗುಂಡಿನ ದಾಳಿಯಲ್ಲಿ 3 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಉಗ್ರರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ 1 ಎಎಸ್ಐ ಈ ಎನ್ಕೌಂಟರ್ನಲ್ಲಿ ಹುತಾತ್ಮರಾಗಿದ್ದಾರೆ. ಮೊನ್ನೆಯಷ್ಟೇ ಗಡಿ ಪ್ರದೇಶದಲ್ಲಿ ಸುರಂಗ ಮಾರ್ಗ ಪತ್ತೆಯಾಗಿದ್ದು ಉಗ್ರರ ನುಸುಳುವಿಕೆ ತಡೆಯಲು ಅನೇಕ ಕ್ರಮ ಕೈಗೊಳ್ಳಲಾಗಿದೆ








