ಮಂಗಳೂರು: ಇಲ್ಲಿಯ ಖಾಸಗಿ ಬೀಚ್ ರೆಸಾರ್ಟ್ನ (Beach Resort) ಈಜುಕೊಳದಲ್ಲಿ (Swimming Pool) ಮುಳುಗಿ ಮೈಸೂರು ಮೂಲದ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ.
ಈ ಘಟನೆ ಮಂಗಳೂರು (Mangaluru) ಹೊರವಲಯದ ಉಚ್ಚಿಲ ಬೀಚ್ ಬಳಿಯ ರೆಸಾರ್ಟ್ ನಲ್ಲಿ ನಡೆದಿದೆ. ಮೈಸೂರು (Mysuru) ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ನಿಶಿತ ಎಂಡಿ (21), ಪಾರ್ವತಿ ಎಸ್ (20) ಹಾಗೂ ಕೀರ್ತನಾ ಎನ್ (21) ಸಾವನ್ನಪ್ಪಿರುವ ಯುವತಿಯರು.
ಶನಿವಾರ ಬೀಚ್ ರೆಸಾರ್ಟ್ ಗೆ ಮೂವರು ಯುವತಿಯರು ಪ್ರವೇಶ ಪಡೆದಿದ್ದರು. ಆದರೆ, ಇಂದು ಬೆಳಗ್ಗೆ ಈಜಲು ಸ್ವಿಮ್ಮಿಂಗ್ ಫೂಲ್ ಗೆ ಇಳಿದು ಮುಳುಗಿ ಸಾವನ್ನಪ್ಪಿದ್ದಾರೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತ್ತು. ಈ ವೇಳೆ ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಜುವ ದೃಶ್ಯವನ್ನು ಐಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈಜು ಕೊಳ ಸಂಪೂರ್ಣ ಕವರ್ ಆಗುವಂತೆ ಸ್ವಲ್ಪ ದೂರದಲ್ಲಿ ಐಫೋನ್ ಇರಿಸಿದ್ದರು. ಮೂವರು ಐದು ಅಡಿ ಹೊಂದಿದ್ದರು. ಮೂವರಿಗೂ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.