ರಾಯಚೂರು: ಸಿಡಿಲು ಬಡಿದು ಅಣ್ಣ-ತಮ್ಮ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ನಡೆದಿದೆ.
ಸಿಂಗನೋಡಿ ಗ್ರಾಮದ ಹೊರ ವಲಯದಲ್ಲಿರುವ ಗೋವಿಂದ ಎಂಬುವರ ಹೊಲದಲ್ಲಿ ಈ ದುರ್ಘಟನೆ ಸಂಭವಿಸಿದೆ. ರವಿಚಂದ್ರ(23), ವಿಷ್ಣು(18) ಮೃತ ಅಣ್ಣ ಮತ್ತು ತಮ್ಮ ಎಂದು ಗುರುತಿಸಲಾಗಿದ್ದು, ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳು ಆಗಿವೆ.
ತಂದೆ ಗೋವಿಂದ, ತಾಯಿ ಮಹಾದೇವಿ ಹಾಗೂ ಇಬ್ಬರು ಅಣ್ಣ-ತಮ್ಮ ಹಸುಗಳಿಗಾಗಿ ತಮ್ಮ ಜಮೀನಿನಲ್ಲಿ ಜೋಪಡಿ ಹಾಕಿದ್ರು. ಮಳೆ ಬಂದ ಹಿನ್ನಲೆಯಲ್ಲಿ ಜೋಪಡಿಯಲ್ಲಿ ಹೋಗಿ ಕುಳಿತ್ತಿದ್ದರು. ಈ ವೇಳೆ ಜೋಪಡಿ ಮೇಲೆ ಸಿಡಿಲು ಬಡಿದು ಅಣ್ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರೆ, ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಂದೆ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಗೋವಿಂದ ಅವರಿಗೆ ಆಸರೆಯಾಗಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವುದು ತಂದೆ, ತಾಯಿ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...








