ಚೀನಾ ಸರ್ಕಾರದ ವಿರುದ್ಧ ಟಿಬೆಟ್ ಯುವ ಕಾಂಗ್ರೆಸ್ ಪ್ರತಿಭಟನೆ…
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಟಿಬೆಟ್ ಯುವ ಕಾಂಗ್ರೆಸ್ ಕಾರ್ಯಕರ್ತರು ಚೀನಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಚೀನಾ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದರು.
ಈ ಪ್ರತಿಭಟನೆಯು ಚೀನಾದ ಕಮ್ಯುನಿಸ್ಟ್ ಪಕ್ಷದ 20 ನೇ ರಾಷ್ಟ್ರೀಯ ಕಾಂಗ್ರೆಸ್ ವಿರುದ್ಧವಾಗಿತ್ತು. ಪ್ರತಿಭಟನಾ ನಿರತ ಯುವಕರು ಟಿಬೆಟ್‌ನ ಸ್ವಾತಂತ್ರ್ಯವನ್ನು ಬೆಂಬಲಿಸಿ ಘೋಷಣೆಗಳನ್ನು ಎತ್ತಿದರು.
ಟಿಬೆಟ್ ಯುವ ಕಾಂಗ್ರೆಸ್, ಟಿಬೆಟ್‌ನಲ್ಲಿ ಚೀನಾದ ಅಕ್ರಮ ಆಕ್ರಮಣವನ್ನ ತಿರಸ್ಕರಿಸುವ ಪುನರುಚ್ಚರಿಸುವ ಪತ್ರಿಕಾ ಹೇಳಿಕೆಯನ್ನ ನೀಡಿದೆ.. ಕಳೆದ ಆರು ದಶಕಗಳಿಂದ ಟಿಬೆಟ್‌ನಲ್ಲಿ ಚೀನಾ ದಬ್ಬಾಳಿಕೆಯ ಆಡಳಿತವನ್ನ ಖಂಡಿಸುವುದಾಗಿ ಟಿಬೆಟ್ ಯುವ ಕಾಂಗ್ರೆಸ್ ಹೇಳಿದೆ. “ವಿಶಿಷ್ಟ ಟಿಬೆಟಿಯನ್ ಸಾಂಸ್ಕೃತಿಕ ಗುರುತಿನ ಮೇಲೆ ದಾಳಿ ನಡೆಯುತ್ತಿದೆ” ಎಂದು ಹೇಳಿಕೆ ತಿಳಿಸಿದೆ.
#WATCH | Himachal Pradesh: On the occasion of Communist Party of China’s 20th National Congress, the Tibetan Youth Congress (TYC) held a protest in Dharamsala yesterday against the Chinese government. pic.twitter.com/9jKwjNrBxm
— ANI (@ANI) October 17, 2022
ಭಾನುವಾರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 20 ನೇ ಕಮ್ಯುನಿಸ್ಟ್ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಾವು ಹಾಂಕಾಂಗ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೇವೆ ಮತ್ತು ಇಲ್ಲಿನ ಪರಿಸ್ಥಿತಿಯು ಅರಾಜಕತೆಯಿಂದ ಆಡಳಿತಕ್ಕೆ ಬದಲಾಗಿದೆ ಎಂದು ಹೇಳಿದರು. ತೈವಾನ್ ಕುರಿತು ಮಾತನಾಡಿದ ಜಿನ್‌ಪಿಂಗ್, ” ಸ್ವಾತಂತ್ರ್ಯದ ಗುರಿಯನ್ನ ಹೊಂದಿರುವ ತೈವಾನ್‌ನ ಪ್ರತ್ಯೇಕತಾವಾದಿ ಚಟುವಟಿಕೆಗಳ ಬಲವಾದ ಪ್ರಚೋದನೆ ಮತ್ತು ಬಾಹ್ಯ ಹಸ್ತಕ್ಷೇಪಕ್ಕೆ ಪ್ರತಿಕ್ರಿಯೆಯಾಗಿ, ನಾವು ಪ್ರತ್ಯೇಕತೆಯ ವಿರುದ್ಧ ದೃಢವಾಗಿ ಹೋರಾಡಿದ್ದೇವೆ. ಹೋರಾಡಿದ್ದೇವೆ ಎಂದು ತಿಳಿಸಿದ್ದಾರೆ.
Tibetan Youth Congress stages protest against Chinese government in Himachal’s Dharamshala








