ಟಿಕ್-ಟಾಕ್ ಇನ್ನು ಅಮೆರಿಕನ್ ಕಂಪನಿ ??
ವಾಷಿಂಗ್ಟನ್, ಜುಲೈ 19: ಟಿಕ್-ಟಾಕ್ ತನ್ನ ಚೀನೀ ಕಂಪನಿಯಾದ ಬೈಟ್ ಡಾನ್ಸ್ ನ ಹಿಡಿತದಿಂದ ಹೊರಬಂದು ಸ್ವತಂತ್ರ ಅಮೆರಿಕನ್ ಕಂಪನಿಯಾಗಿ ಕಾರ್ಯನಿರ್ವಹಿಸುವುದು ನಿಷೇಧಿಸುವುದಕ್ಕಿಂತ ಉತ್ತಮ ಪರಿಹಾರವಾಗಿದೆ ಎಂದು ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಟಿಕ್‌ಟಾಕ್ ಚೀನಾದ ಹಿಡಿತದಲ್ಲಿರುವ ಕಂಪನಿಯಿಂದ ಹೊರಬಂದು, ಸ್ವತಂತ್ರ ಅಮೆರಿಕನ್ ಕಂಪನಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ವರದಿಗಳಿವೆ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಸುದ್ದಿಗಾರರಿಗೆ ತಿಳಿಸಿದರು.
ಯಾವುದಾದರೂ ಅಮೇರಿಕನ್ ಕಂಪನಿಯು ಚೀನೀ ಸಂಸ್ಥೆಯನ್ನು ಖರೀದಿಸಲು ಬಯಸುತ್ತದೆಯೇ ಎಂದು ಕೇಳಿದಾಗ, ನಾನು ಅದರ ಬಗ್ಗೆ ಏನನ್ನು ಹೇಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.

ಇದು ನಿಜವಾಗಿಯೂ ಮಾರುಕಟ್ಟೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ ಮತ್ತು ನಿಷೇಧಿಸುವುದಕ್ಕಿಂತ ಇದು ಉತ್ತಮ ಪರಿಹಾರವಾಗಿದೆ ಎಂದು ನಾನು ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಉನ್ನತ ಆರ್ಥಿಕ ಸಲಹೆಗಾರ, ಅಮೆರಿಕದ ಕಂಪನಿಯಾದ ನಂತರ ಟಿಕ್‌ಟಾಕ್‌ನ ಸರ್ವರ್‌ಗಳು ಯುಎಸ್‌ನಲ್ಲಿರುತ್ತವೆ ಮತ್ತು ಚೀನಾದಲ್ಲಿ ಅಲ್ಲ ಎಂದು ಹೇಳಿದರು.
ಟಿಕ್‌ಟಾಕ್ ಸೇರಿದಂತೆ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ವಾರಗಳ ಅಗತ್ಯವಿರುವುದಾಗಿ ಶ್ವೇತಭವನ ಈ ಮೊದಲು ಸೂಚಿಸಿತು.
ಟಿಕ್‌ಟಾಕ್, ವೀಚಾಟ್ ಮತ್ತು ಇತರ ಮೊಬೈಲ್ ಅಪ್ಲಿಕೇಶನ್ ಗಳು ರಾಷ್ಟ್ರೀಯ ಭದ್ರತಾ ಅಪಾಯಕ್ಕೆ ಸಂಬಂಧಿಸಿದ್ದು, ನಿರ್ದಿಷ್ಟವಾಗಿ ಇದು ವಿದೇಶಿಯರಿಂದ ಅಮೆರಿಕನ್ ನಾಗರಿಕರ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಂಬಂಧಪಟ್ಟದ್ದಾಗಿದೆ ಎಂದು ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್ ಏರ್ ಫೋರ್ಸ್ ಒನ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಟಿಕ್ ಟಿಕ್ ಮಾಧ್ಯಮ ಸಲಹೆಗಾರ, ಶ್ವೇತಭವನದ ವರದಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಬೈಟ್ ಡಾನ್ಸ್ ತನ್ನ ಸಂಸ್ಥೆಯಲ್ಲಿ ಕೆಲವೊಂದು ಬದಲಾವಣೆ ಬಗ್ಗೆ ಮೌಲ್ಯಮಾಪನ ಮಾಡುತ್ತಿದ್ದು , ಬಳಕೆದಾರರ ಹಿತ ಕಾಪಾಡುವುದು ಮತ್ತು ಖಾಸಗಿ ವಿಚಾರಗಳ ರಹಸ್ಯ ಮತ್ತು ಗೌಪ್ಯತೆ ಆದ್ಯ ಕರ್ತವ್ಯ ಎಂದು ಹೇಳಿದರು.
ಕಳೆದ ತಿಂಗಳು ಭಾರತವು ಟಿಕ್‌ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದ ನಂತರ ಅಮೆರಿಕದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಇದು ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆಗೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹೇಳಿತ್ತು
ಬುಧವಾರ, 24 ಪ್ರಭಾವಿ ರಿಪಬ್ಲಿಕನ್ ಕಾಂಗ್ರೆಸ್ಸಿಗರ ತಂಡವು ಅಧ್ಯಕ್ಷ ಟ್ರಂಪ್‌ಗೆ ಟಿಕ್‌ಟಾಕ್ ಮತ್ತು ಇತರ ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವಂತೆ ಒತ್ತಾಯಿಸಿತು. ರಾಷ್ಟ್ರೀಯ ಭದ್ರತಾ ಕಾಳಜಿಯಿಂದಾಗಿ ಚೀನಾದ ಡಜನ್ ಗಟ್ಟಲೆ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಅಸಾಮಾನ್ಯ ಕ್ರಮವನ್ನು ಭಾರತ ಕೈಗೊಂಡಿದೆ ಎಂದು ಹೇಳಿತ್ತು.








