ಭೋಪಾಲ್: ‘ಟೈಗರ್ ಅಭಿ ಝಿಂದಾ ಹೇ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ‘ಇರೋದು ಒಂದೇ ಟೈಗರ್, ಅದು ಕಾಡಿನಲ್ಲಿದೆ’ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ದಿಗ್ವಿಜಯ್ ಸಿಂಗ್ ಟ್ವೀಟ್ ನಲ್ಲಿ.. ‘ಇರೋದು ಒಂದೇ ಟೈಗರ್, ಅದು ಕಾಡಿನಲ್ಲಿದೆ’. “ಹುಲಿಯ ಗುಣ ನಿಮಗೆ ತಿಳಿದಿದೆ, ಕಾಡಿನಲ್ಲಿ ಕೇವಲ ಒಂದು ಹುಲಿ ಮಾತ್ರ ಜೀವಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾನ್ ರ‍್ಕಾರ ತನ್ನ ಸಂಪುಟವನ್ನು ಜುಲೈ 2 ರ ಗುರುವಾರ ವಿಸ್ತರಣೆ ಮಾಡಿದೆ. ಈ ವಿಸ್ತರಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸರ‍್ಪಡೆಯಾದ ಸಿಂಧಿಯಾ ಪರ ಮುಖಂಡರಿಗೂ ಸ್ಥಾನ ನೀಡಲಾಗಿದೆ. ಕ್ಯಾಬಿನೆಟ್ ವಿಸ್ತರಣೆಯ ನಂತರ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, “ನಾನು ಅವರಿಬ್ಬರನ್ನೂ ಹೇಳಲು ಬಯಸುತ್ತೇನೆ. ಕಮಲ್ ನಾಥ್ ಜಿ ಮತ್ತು ದಿಗ್ವಿಜಯ್ ಸಿಂಗ್ ಜಿ, ನಿಮ್ಮಿಬ್ಬರಿಂದ ನನಗೆ ಯಾವುದೇ ಪ್ರಮಾಣ ಪತ್ರದ ಅಗತ್ಯವಿಲ್ಲ, ಕಳೆದ 15 ತಿಂಗಳಲ್ಲಿ ನೀವು ರಾಜ್ಯವನ್ನು ಯಾವ ರೀತಿಯಲ್ಲಿ ಕೊಳ್ಳೆ ಹೊಡೆದಿದ್ದಾರೆ ಎಂಬ ಬಗ್ಗೆ ಜನರಿಗೆ ತಿಳಿದಿದೆ. ಮಧ್ಯ ಪ್ರದೇಶದ ಜನತೆಗೆ ನೀವು ನೀಡಿರುವ ಭರವಸೆಯನ್ನು ಎಷ್ಟು ಈಡೇರಿಸಿದ್ದೀರಿ ಎಂದು ಜನ ಪರಿಶೀಲನೆ ಮಾಡಲಿದ್ದಾರೆ, ನಾನು ಬೇರೆ ಏನು ಮಾತನಾಡುವುದಿಲ್ಲ ಟೈಗರ್ ಅಭಿ ಜಿಂದಾ ಹೈ ಎಂದು ಮಾತ್ರ ಹೇಳುತ್ತೇನೆ ಎಂದಿದ್ದಾರೆ.








