ಮಡಿಕೇರಿ: ಕೊಡಗಿನ ಜನರಿಗೆ ಕಳೆದ ಹಲವು ದಿನಗಳಿಂದ ಹುಲಿಗಳ ದಾಳಿ ಭೀತಿ ಹುಟ್ಟಿಸಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಮದಲ್ಲಿ ಕಾಡು ಹಂದಿ ಸೆರೆ ಹಿಡಿಯಲು ಇಟ್ಟಿದ್ದ ಬಲೆಗೆ ಹುಲಿಯೊಂದು ಸೆರೆಯಾಗಿದೆ.

ರೈತರ ಜಮೀನುಗಳಿಗೆ ನುಗ್ಗಿ ಫಸಲು ನಾಶ ಮಾಡುತ್ತಿದ್ದ ಕಾಡುಹಂದಿಗಳ ಉಪಟಳ ತಡೆಯಲು ರೈತರು ಬಲೆ ಹಾಕಿದ್ದರು. ಬಾಳೆಲೆ ಗ್ರಾಮದ ಪಶು ಆಸ್ಪತ್ರೆ ಹಿಂಭಾಗದಲ್ಲಿ ಇರಿಸಲಾಗಿದ್ದ ಬಲೆಗೆ ತಡರಾತ್ರಿ ಆಹಾರ ಹುಡುಕಿಕೊಂಡು ಗ್ರಾಮಕ್ಕೆ ನುಗ್ಗಲು ಯತ್ನಿಸಿದ ಹುಲಿ ಬಲೆಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಬಾಳೆಲೆ ಭಾಗದಲ್ಲಿ ಈ ಹುಲಿ ಪಶುಗಳ ಮೇಲೆ ನಿರಂತರ ದಾಳಿ ಮಾಡುತ್ತಿತ್ತು. ಕಾಡುಹಂದಿ ಉಪಟಳ ತಡೆಗೆ ಇಟ್ಟಿದ್ದ ಬಲೆಗೆ ಹುಲಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿದೆ.

ಜಾನುವಾರುಗಳ ಮೇಲೆ ನಡೆಯುತ್ತಿದ್ದ ಹುಲಿ ದಾಳಿಯನ್ನು ತಡೆಯಲು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಹುಲಿಯನ್ನು ರಕ್ಷಿಸಿ ಸೂಕ್ತ ಸ್ಥಳಕ್ಕೆ ಸಾಗಿಸುವ ಕಾರ್ಯಚಣೆಯಲ್ಲಿ ತೊಡಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








