ಹುಲಿಗಳನ್ನು ನರಭಕ್ಷಕ ಎನ್ನುವಂತಿಲ್ಲ : NTCA
ಕೊಡಗು:ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (NTCA) ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ನರಭಕ್ಷಕ ಎಂದು ಕರೆಯುವಂತಿಲ್ಲ ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ.
ಕೊಡಗಿನಲ್ಲಿ ನಡೆಯುತ್ತಿರುವ ನಿರಂತರ ದಾಳಿ ಮತ್ತು ಜೀವಹಾನಿಗಳ ಸಂಬಂಧ ವರದಿಗಳು ಮತ್ತು ಸಾರ್ವಜನಿಕವಾಗಿ ನರಭಕ್ಷಕ ಎಂದು ಹೇಳುವುದು ತಪ್ಪು ಎಂದು ಪ್ರಾಧಿಕಾರ ಹೇಳಿದೆ.
ಮಾನವ ಜೀವಕ್ಕೆ ಅಪಾಯಕಾರಿ ಎಂದು ಕರೆಯುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹಿನ್ನೆಲೆ
ಫೆಬ್ರವರಿ 22 ರಂದು ಶ್ರೀಮಂಗಳ ಹೋಬಳಿಯ ಟಿ ಶೆಟ್ಟಿಗೇರಿ ಮತ್ತು ಕುಮಟೂರು ಗ್ರಾಮಗಳಲ್ಲಿ ಹುಲಿ ದಾಳಿ ನಡೆಸಿತ್ತು. ಈ ವೇಳೆ ಅಯ್ಯಪ್ಪ ಎಂಬುವವರು ಮೃತಪಟ್ಟಿದ್ದರು.
ಇದಾದ ಬಳಿಕ 21ನೇ ತಾರೀಕು ಪಣಿ ಎರವರ ಬೋಳಕ್ಕ ಎಂಬೋರು ಹುಲಿಗೆ ಬಲಿಯಾಗಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಇಳಿದಿದೆ.
ನಿರಂತರವಾಗಿ ಕಾರ್ಯಾಚರಣೆ ನಡೆಸಿದರೂ ಹುಲಿ ಜಾಡು ಮಾತ್ರ ಪತ್ತೆಯಾಗಿಲ್ಲ. ಈ ಹಿನ್ನೆಲೆ ಹುಲಿಗೆ ಗುಂಡಿಕ್ಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.










