ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಲು ಮೋಬೈಲ್ ನುಂಗಿದ ಭೂಪ..!
ನವದೆಹಲಿ : ಕೈದಿಯೊಬ್ಬ ಜೈಲು ಅಧಿಕಾರಿಗಳ ಕಣ್ ತಪ್ಪಿಸಲು ಅಕ್ರಮವಾಗಿ ಬಳಸುತ್ತಿದ್ದ ಮೊಬೈಲ್ ಅನ್ನು ನುಂಗಿರುವ ಘಟನೆಯುವ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದಿದೆ.. ಕೈದಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನು. ಜನವರಿ 5ರಂದು ಜೈಲು ನಂಬರ್ 1ಕ್ಕೆ ಪೊಲೀಸ್ಅಧಿಕಾರಿಗಳು ಮೊಬೈಲ್ ಪರಿಶೀಲನೆಗೆ ಬಂದಾಗ ಹೆದರಿ ಮೊಬೈಲ್ ನುಂಗಿದ್ದಾನೆ..
ಈ ಕುರಿತಾಗಿ ಮಾತನಾಡಿರುವ ಡೈರೆಕ್ಟರ್ ಜನರಲ್ ಸಂದೀಪ್ ಗೋಯೆಲ್, ಆತನನನ್ನು ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಆರೋಗ್ಯವಾಗಿದ್ದಾನೆ, ಆದರೆ ಮೊಬೈಲ್ ಫೋನ್ ಇನ್ನು ಹೊಟ್ಟೆಯಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.
ಅಲ್ಲದೇ ತಿಹಾರ್ ಜೈಲಿನಲ್ಲಿ ಶೀಘ್ರದಲ್ಲೇ ಎರಡು ಎಕ್ಸ್-ರೇ ಆಧಾರಿತ ಮಾನವ ದೇಹ ಸ್ಕ್ಯಾನರ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಆಗ ಜೈಲು ಆವರಣದೊಳಗೆ ಅಕ್ರಮ ವಸ್ತುಗಳು ಮತ್ತು ಗ್ಯಾಜೆಟ್ಗಳು ಒಳನುಸುಳುವಿಕೆಯನ್ನು ತಡೆಯಲುಈ ಕ್ರಮವನ್ನು ವಹಿಸಲಾಗಿದೆ. ಮೊಬೈಲ್ ಬಳಕೆಯನ್ನು ತಡೆಯಲು ಹೊಸ ತಂತ್ರಜ್ಞಾನ ಮತ್ತು ಸಿಗ್ನಲ್ ನಿರ್ಬಂಧಿಸುವ ಟವರ್ಗಳನ್ನು ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.