ಮುಂಬೈ : ತನ್ನ ವಿಭಿನ್ನ ವಿಡಿಯೋಗಳ ಮೂಲಕ ಎಲ್ಲರ ಮನಗೆದ್ದಿದ್ದ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 16 ವರ್ಷದ ಸಿಯಾ ಟಿಕ್ ಟಾಕ್ ವಿಡಿಯೋಗಳ ಮೂಲಕವೇ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದರು. ತಮ್ಮ ಡ್ಯಾನ್ಸ್, ಡಬ್ಬಿಂಗ್ ಮೂಲಕವೇ ಜನರಿಗೆ ಚಿರಪರಿಚಿತರಾಗಿದ್ದರು. ಸಿಯಾ ಕಕ್ಕರ್ ಸಾವಿನ ಬಗ್ಗೆ ಬಾಲಿವುಡ್ ನ ಫ್ಯಾಷನ್ ಫೋಟೋಗ್ರಾಫರ್ ವೈರಲ್ ಬಯಾನಿ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
https://www.instagram.com/p/CBnKWPnpBe3/?utm_source=ig_web_button_share_sheet
ಸಿಯಾ ಕಕ್ಕರ್ ಟಿಕ್ ಟಾಕ್ ನಲ್ಲಿ 14 ಲಕ್ಷ ಫಾಲೋವರ್ಸ್ ಹೊಂದಿದ್ದರು, ಅಲ್ಲದೇ ತನ್ನ ವಿಭಿನ್ನ ವಿಡಿಯೋ ಮೂಲಕ ಹೆಚ್ಚಿನ ಜನರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಅಕಾಲಿಕ ಮರಣಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇನ್ನೊಂದೆಡೆ ಸಿಯಾ ಕುಟುಂಬಸ್ಥರು ಕೂಡ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.








