TikTok ಅನ್ನು ಭಾರತದಲ್ಲಿ ದೀರ್ಘಕಾಲ ನಿಷೇಧಿಸಲಾಗಿದೆ.. ಆದರೆ ಮೂಲಗಳ ಪ್ರಕಾರ ಈ ಕಿರು-ವೀಡಿಯೊ ಅಪ್ಲಿಕೇಶನ್ ಭಾರತಕ್ಕೆ ಹಿಂತಿರುಗುತ್ತದೆ ಎನ್ನಲಾಗ್ತಿದೆ.. ಕೆಲವು ತಿಂಗಳ ಹಿಂದೆ, ಟಿಕ್‌ಟಾಕ್ ಮಾಲೀಕತ್ವದ ಕಂಪನಿ ಬೈಟ್ ಡಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಅನ್ನು ಮರುಸ್ಥಾಪಿಸಲು ಮುಂಬೈ ಮೂಲದ ಕಂಪನಿಯೊಂದಿಗೆ ಮಾತುಕತೆ ನಡೆಸಿತ್ತು. ಈಗ ಭಾರತದಲ್ಲಿ ಪ್ರಮುಖ ಇಸ್ಪೋರ್ಟ್ಸ್ ಮತ್ತು ಗೇಮಿಂಗ್ ವೆಂಚರ್‌ನ ಸಿಇಒ ಆಗಿರುವ ಸ್ಕೈಸ್‌ಪೋರ್ಟ್ಸ್ ಟಿಕ್ ಟಾಕ್ ನಿಜವಾಗಿಯೂ ಭಾರತಕ್ಕೆ ಬರುತ್ತಿದೆ ಎಂದು ದೃಢಪಡಿಸಿದೆ.
ಭಾರತದಲ್ಲಿ ತನ್ನ ಅತಿದೊಡ್ಡ ಬಳಕೆದಾರರ ನೆಲೆಯನ್ನು ಹೊಂದಿರುವ ಟಿಕ್‌ಟಾಕ್ ಅನ್ನು 2020 ರಲ್ಲಿ ಭಾರತ ಸರ್ಕಾರವು ನಿಷೇಧಿಸಿತು. ಟಿಕ್‌ಟಾಕ್ ಜೊತೆಗೆ, ರಾಷ್ಟ್ರೀಯ ಭದ್ರತಾ ಕಾರಣಗಳಿಂದಾಗಿ 58 ಇತರ ಅಪ್ಲಿಕೇಶನ್‌ಗಳನ್ನು ಸಹ ನಿಷೇಧಿಸಲಾಗಿದೆ.. ಇದೇ ಟಿಕ್ ಟಾಕ್ ನಿಂದ ಬೇಜಾನ್ ಜನ ಸ್ಟಾರ್ ಗಳಾದ್ರೂ.. ಫ್ಯಾನ್ಸ್ ಗಳನ್ನ ಗಿಟ್ಟಿಸಿಕೊಂಡು ಇದೀಗ , ರೀಲ್ಸ್ , ಯೂಟ್ಯೂಬ್ ನಲ್ಲಿ ಮಿಂಚುತ್ತಿದ್ದಾರೆ..
ಅಂದ್ಹಾಗೆ ಮತ್ತೆ ಟಿಕ್ ಟಾಕ್ ಬಂದರೆ ,, ಟಿಕ್ ಟಾಕ್ ಕ್ರೇಜ್ ಹಿಂದಿಗಿಂತಲೂ ಹೆಚ್ಚೇ ಇರಲಿದೆ ಎನ್ನಲಾಗ್ತಿದೆ..








