ಮತ್ತೆ ಭಾರತಕ್ಕೆ ರೀ ಎಂಟ್ರಿ ಕೊಡಲಿದ್ಯಾ ಟಿಕ್ ಟಾಕ್..?
ಬೆಂಗಳೂರು: ಭಾರತದ ಜೊತೆ ಗಡಿ ವಿವಾದ ಮಾಡಿಕೊಂಡು , ಭಾರತೀಯರನ್ನ ಕೆಣಕಿದ್ದ ಚೀನಾಗೆ ಭಾರತ ತಕ್ಕ ಉತ್ತರ ನೀಡಿತ್ತು. ಆರ್ಥಿಕವಾಗಿ ದೊಡ್ಡ ಪೆಟ್ಟು ನೀಡಿತ್ತು. ಇಡೀ ವಿಶ್ವಾದ್ಯಂತ , ಅದ್ರಲ್ಲೂ ಬಾರತದಲ್ಲಿಯೇ ಹೆಚ್ಚು ಜನಪ್ರಿಯತೆ ಗಳಿಸಿದ್ದ ಕಿರು ವಿಡಿಯೋ ಆಪ್ ಟಿಕ್ ಟಾಕ್ ಹಾಗೂ ಆನ್ ಲೈನ್ ಗೇಮ್ ಪಬ್ಜಿ ಸೇರಿ ಚೀನಾದ ಒಟ್ಟು 150 ಕ್ಕೂ ಹೆಚ್ಚು ಆಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು.. ಇದ್ರಿಂದ ಅನೇಕ ಟಿಕ್ ಸ್ಟಾರ್ ಸ್ಟಾರ್ ಗಳು ಹಾಗೂ ಪಬ್ ಜಿ ಪ್ರಿಯರು ನಿರಾಸೆಯಾಗಿದ್ದರು. ನಂತರ ಪಬ್ ಜಿ ಹೊಸ ಅವತಾರದೊಂದಿಗೆ ಭಾರತಕ್ಕೆ ವಾಪಸಾಗಿದೆ.. ಇದೀಗ ಟಿಕ್ ಟಾಕ್ ಸ್ಟಾರ್ ಗಳಿಗೂ ಖುಷಿ ಸುದ್ದಿ ಸಿಗುವ ನಿರೀಕ್ಷೆ ಇದೆ.. ಹೌದು ಟಿಕ್ಟಾಕ್ ಆಯಪ್ನ್ನು ಚೀನಾದ ಬೈಟ್ ಡ್ಯಾನ್ಸ್ ಸಂಸ್ಥೆ ತಯಾರಿಸಿತ್ತು.
ಆ ಹೆಸರಿಗೆ ಈಗಾಗಲೇ ಟ್ರೇಡ್ ಮಾರ್ಕ್ ಪಡೆದಿರುವ ಸಂಸ್ಥೆ ಇದೀಗ TikTock ಹೆಸರಿಗೆ ಟ್ರೇಡ್ ಮಾರ್ಕ್ ಪಡೆಯಲು ಮುಂದಾಗಿದೆ. ಜುಲೈ 6ನೇ ತಾರೀಖಿನಂದು ಟ್ರೇಡ್ ಮಾರ್ಕ್ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಇನ್ನೂ ಅರ್ಜಿ ಪರಿಶೀಲನೆ ಹಂತದಲ್ಲಿದೆ. ಅಷ್ಟೇ ಅಲ್ಲ ಭಾರತದ ಐಟಿ ಇಲಾಖೆಯ ಎಲ್ಲ ನಿಯಮಗಳಿಗೆ ಒಪ್ಪಿಕೊಳ್ಳುವುದಾಗಿ ಸಂಸ್ಥೆ ಈ ಹಿಂದೆಯೇ ತಿಳಿಸಿದೆ. ಹೀಗಾಗಿ ಮತ್ತೆ ಹೊಸ ಅವತಾರದಲ್ಲಿ ಭಾರತಕ್ಕೆ ಟಿಕ್ ಟಾಕ್ ಕೂಡ ರೀ ಎಂಟ್ರಿ ಕೊಡುತ್ತಾ ಅನ್ನೋ ಅನುಮಾನಗಳು ಮೂಡಿವೆ..