Tilak Varma : ತಿಲಕ್ ವರ್ಮಾಗೆ ಸಿಕ್ಕ 1.70 ಕೋಟಿ ಏನಾಯ್ತು..?
ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಪ್ರದರ್ಶನ ನೀಡಿದ್ದು ಗೊತ್ತೇ ಇದೆ.
ಐಪಿಎಲ್ ಚರಿತ್ರೆಯಲ್ಲಿ ಐದು ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಈ ಸೀಸನ್ ನಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದು, ಮುಂಬೈ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಈ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ ಮುಂಬೈ ಇಂಡಿಯನ್ಸ್, ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಬರೋಬ್ಬರಿ 10 ಪಂದ್ಯಗಳಲ್ಲಿ ಸೋಲು ಕಂಡು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದ್ರೂ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ ಉತ್ತಮ ಪ್ರದರ್ಶನ ನೀಡಿದರು.
ಅದರಲ್ಲೂ ಮುಖ್ಯವಾಗಿ ಮುಂಬೈ ಇಂಡಿಯನ್ಸ್ ತಂಡದ ಟೂರ್ನಿ ಉದ್ದಕ್ಕೂ ತಿಲಕ್ ವರ್ಮಾ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಈ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ 14ಕ್ಕೆ 14 ಪಂದ್ಯಗಳನ್ನಾಡಿದ ತಿಲಕ್ ವರ್ಮಾ, 397 ರನ್ ಗಳಿಸಿದ್ದಾರೆ.
ಇದರಲ್ಲಿ ಎರಡು ಅರ್ಧಶತಕಗಳಿವೆ.
ತಿಲಕ್ ವರ್ಮಾ ಅವರ ಈ ಪ್ರದರ್ಶನದ ಬಗ್ಗೆ ತಂಡದ ನಾಯಕ ರೋಹಿತ್ ಶರ್ಮಾ, ತಂಡದ ಹೆಡ್ ಕೋಚ್ ಮಹೇಲಾ ಜಯ ವರ್ದನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![tilak-varma-given-all-ipl-money-father saaksha tv](http://saakshatv.com/wp-content/uploads/2022/04/thilak-varma-300x289.jpg)
ತಿಲಕ್ ಆಡುತ್ತಿರೋದು ಮೊದಲ ಸೀಸನ್ ಆದ್ರೂ, ಐಪಿಎಲ್ ನಲ್ಲಿ ಸಾಕಷ್ಟು ಅನುಭವ ಇರುವಂತೆ ಬ್ಯಾಟ್ ಬೀಸುತ್ತಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಂದಹಾಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 1.70 ಕೋಟಿ ರೂಪಾಯಿಗೆ ಮೆಗಾ ಹರಾಜಿನಲ್ಲಿ ಖರೀದಿ ಮಾಡಿತ್ತು.
ಐಪಿಎಲ್ ಟೂರ್ನಿ ಬಳಿಕ ಮನೆಗೆ ವಾಪಸ್ ಆಗಿರುವ ತಿಲಕ್ ವರ್ಮಾ, 1.70 ಕೋಟಿ ರುಪಾಯಿಗಳನ್ನು ತಂದೆಗೆ ನೀಡಿದ್ದಾರೆ.
ಈ ವಿಚಾರದ ಬಗ್ಗೆ ತಿಲಕ್ ವರ್ಮಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನನ್ನ ತಲೆಯಲ್ಲಿ ಕ್ರಿಕೆಟ್ ಬಿಟ್ಟು ಬೇರೇನು ಇಲ್ಲ.
ಇಂಡಿಯನ್ ಪ್ರಿಮಿಯರ್ ಲೀಗ್ ನನಗೆ ಸಿಕ್ಕಿದ್ದನ್ನೆಲ್ಲಾ ನನ್ನ ತಂದೆಗೆ ನೀಡಿದ್ದೇನೆ.
ಯಾರೇ ಆಗಿರಲಿ ಹಣ ಶರಣು ಅಂತಾರೆ. ಅದಕ್ಕೆ ನಾನು ನನಗೆ ಸಿಕ್ಕ ಹಣವನ್ನು ತಂದೆಗೆ ನೀಡಿ, ಪ್ಲೀಸ್ ನನ್ನನ್ನು ದುಡ್ಡಿನಿಂದ ದೂರ ಇಡಿ ಎಂದು ಹೇಳಿದೆ ಎಂದರು.