ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತೀಯ ಆಟಗಾರ ತಿಲಕ್ ವರ್ಮಾ ದಾಖಲೆಯ ಶತಕ ಸಿಡಿಸಿ, ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ಸಾದನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ತಿಲಕ್ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಅವರ ಟಿ20 ವೃತ್ತಿ ಜೀವನದ ಚೊಚ್ಚಲ ಶತಕ ಎಂಬುವುದು ವಿಶೇಷ. ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುತ್ತಿದ್ದ 2ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ತಿಲಕ್, ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು 219 ರನ್ ಗಳಿಗೆ ಏರಿಸಿದ್ದಾರೆ.
ತಿಲಕ್ ವರ್ಮಾ ಅಭಿಷೇಕ್ ಜೊತೆಗೂಡಿ ಎರಡನೇ ವಿಕೆಟ್ಗೆ 107 ರನ್ಗಳ ಜೊತೆಯಾಟ ನೀಡಿದರು. ಇನಿಂಗ್ಸ್ನ 19 ನೇ ಓವರ್ನಲ್ಲಿ ತಮ್ಮ ವೃತ್ತಿಜೀವನದ ಮೊದಲ ಶತಕ ಸಿಡಿಸಿದರು. 51 ಎಸೆತಗಳನ್ನು ಎದುರಿಸಿದ ತಿಲಕ್, 196.07 ಸ್ಟ್ರೈಕ್ ರೇಟ್ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಬಾರಿಸಿ ಶತಕ ಪೂರೈಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಭಾರತದ 11ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ ಭಾರತದ 5 ನೇ ಆಟಗಾರ ಎಂಬ ದಾಖಲೆ ತಿಲಕ್ ಪಾಲಾಯಿತು.
ತಿಲಕ್ ವರ್ಮಾ ಅವರ ಈ ಶತಕದ ಇನ್ನಿಂಗ್ಸ್ನಿಂದಾಗಿ ಭಾರತ ತಂಡ 219 ರನ್ ಗಳಿಸಿದೆ.
ಈ ಶತಕದ ಮೂಲಕ ತಿಲಕ್ ವರ್ಮಾ ಟಿ20ಯಲ್ಲಿ ಐಸಿಸಿ ಸಂಪೂರ್ಣ ಮಾನ್ಯತೆ ಪಡೆದ ತಂಡದ ವಿರುದ್ಧ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ತಿಲಕ್ ವರ್ಮಾ 22 ವರ್ಷ, 5 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಅಹ್ಮದ್ ಶಹ್ಬಾಜ್ ಹೆಸರಿನಲ್ಲಿತ್ತು. ಅಹ್ಮದ್ 22 ವರ್ಷ 127 ದಿನಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು.
3ನೇ ಸ್ಥಾನದಲ್ಲಿ ಭಾರತದ ಶುಭ್ಮನ್ ಗಿಲ್ ಇದ್ದು, ಅವರುಮ್ಮ 23 ವರ್ಷ, 146 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಗಿಲ್ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಇನ್ನೂ 4ನೇ ಸ್ಥಾನದಲ್ಲಿ ಸುರೇಶ್ ರೈನಾ ಇದ್ದು, ಅವರು ದಕ್ಷಿಣ ಆಫ್ರಿಕಾ ವಿರುದ್ಧ 23 ವರ್ಷ ಮತ್ತು 156 ದಿನಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.