ನಾನು ಬದುಕಿರೋವರೆಗೂ ರಾಜಕೀಯ ಬಿಡಲ್ಲ : ಕಮಲ್ ಹಾಸನ್
ಬಹುಭಾಷಾ ಸ್ಟಾರ್ ನಟ ಕಮಲ್ ಹಾಸನ್ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನೇ ಮಾಡಿ ಒಂದು ಮೈಲುಗಲ್ಲು ಸೃಷ್ಟಿ ಮಾಡಿದ್ದಾರೆ.. ಎಂಥಹದ್ದೇ ಪಾತ್ರ ಇದ್ದರು ಕಮಲ್ ಹಾಸನ್ ಅವರಿಗಾಗಿಯೇ ಸೃಷ್ಟಿ ಮಾಡಿರುವಂತೆ ಆ ಪಾತ್ರಕ್ಕೆ ನ್ಯಾ ಒದಗಿಸುವ ಪರಿಣಿತರು.. ನೂರಾರು ಸಿನಿಮಾಗಳಲ್ಲಿ ನಟಿಸಿ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ಕಮಲ್ ಹಾಸನ್ ಸದ್ಯ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.. ಮಕ್ಕಳ್ ನೀಧಿ ಮಯಮ್ ಎಂಬ ಪಕ್ಷದ ಸಂಸ್ಥಾಪಕರಾಗಿದ್ದಾರೆ.
ಇತ್ತೀಚಿಗಷ್ಟೆ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಇದಾದ ನಂತರ ರಾಜಕೀಯದಿಂದ ಹಿಂದೆ ಸರಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.. ಆದ್ರೆ ಈ ಬಗ್ಗೆ ಮಾತನಾಡಿರುವ ಕಮಲ್ ನಾನು ಬದುಕಿರುವ ವರೆಗೂ ರಾಜಕೀಯದಲ್ಲೇ ಇರುವುದಾಗಿ ಎಂದಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ತಾನು ಸೇರಿದಂತೆ ಪಕ್ಷದ ಎಲ್ಲರೂ ಸೋತು ಹೋಗಿದ್ದರು. ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಾಣುತ್ತಿದ್ದಂತೆ ಅನೇಕರು ಪಕ್ಷ ತೊರೆದರು.
ಕಮಲ್ ಹಾಸನ್ ಕೂಡ ರಾಜಕೀಯದಲ್ಲಿ ಹೆಚ್ಚುದಿನ ಇರುವುದಿಲ್ಲ, ರಾಜಕೀಯ ತೊರೆಯುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಇದೀಗ ಈ ಕುರಿತು ಮಾತನಾಡಿರುವ ಕಮಲ್, ‘ಪಾರ್ಟಿ ಸಮಾಜದಲ್ಲಿ ನಾಯಕರನ್ನು ಮತ್ತು ಸ್ಟಾರ್ ಗಳನ್ನು ಸೃಷ್ಟಿಸಿದೆ’ ಎಂದಿದ್ದಾರೆ.
ಕೆಲವರಿಗೆ ಇದು ಸರ್ವಾಧಿಕಾರ. ಪಕ್ಷದಲ್ಲಿ ಹೊಸಬರಾಗಿದ್ದರೂ ಅವರ ಪ್ರತಿಭೆ ಆಧಾರದ ಮೇಲೆ ಜನರಿಗೆ ದೊಡ್ಡ ಜವಾಬ್ದಾರಿ ನೀಡಿದಾಗ ಅದು ಪ್ರಜಾಪ್ರಭುತ್ವದ ಉತ್ತುಂಗ ಎಂದಿದ್ದಾರೆ. ನಾನು ಎಷ್ಟು ಪಾರದರ್ಶಕನಾಗಿದ್ದೆ ಮತ್ತು ಎಲ್ಲರಿಗೂ ನಾನು ಹೇಗೆ ಅಧಿಕಾರ ನೀಡಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ. ‘ಇಂಥ ಕೆಟ್ಟ ಫಲಿತಾಂಶದ ಜವಾಬ್ದಾರಿ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಅಭ್ಯಾಸ ಎಂದಿದ್ದಾರೆ.
ನಾವು ಮತ್ತೆ ಇದನ್ನು ಸಂಭವಿಸಲು ಬಿಡುವುದಿಲ್ಲ. ಆಧಾರ ರಹಿತ ಆರೋಪಗಳಿಗೆ ನಾವು ಪ್ರತಿಕ್ರಿಯಿಸಬೇಕಿಲ್ಲ. ಸತ್ಯ ತಿಳಿದ್ದದ್ದರೂ ನಾವು ಸುಮ್ಮನಿರಬೇಕೆ ಎಂದು ಕೇಳುವವರಿಗೆ ಸತ್ಯವನ್ನು ತಿಳಿಸಿ ಮತ್ತು ವಾದಿಸಿ ಆದರೆ ಅಸಭ್ಯ ಭಾಷೆ ಬಳಸಬೇಡಿ ಎನ್ನುತ್ತೇನೆ’ ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








