Virat Kohli | ಕೊಹ್ಲಿಯನ್ನ ರನೌಟ್ ಮಾಡಿದ್ದು ನಮಗೆ ಹೆಲ್ಪ್ ಆಯ್ತು..
2020 ರ ಕೊನೆಯಲ್ಲಿ ಬಾರ್ಡರ್ – ಗವಾಸ್ಕರ್ ಸಿರೀಸ್ ಆಡೋದಕ್ಕೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು.
ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಸಾರಥ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು.
36 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಕೆಟ್ಟ ದಾಖಲೆಗೆ ಕೂಡ ಟೀಂ ಇಂಡಿಯಾ ಪಾತ್ರವಾಗಿತ್ತು.
ಈ ಪಂದ್ಯದ ಬಳಿಕ ವಿರಾಟ್ ಕೊಹ್ಲಿ, ಸ್ವದೇಶಕ್ಕೆ ವಾಪಸ್ ಆದರು.
ರಹಾನೆ ಟೀಂ ಇಂಡಿಯಾದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಸರಣಿಯನ್ನು ಕೈವಶ ಮಾಡಿಕೊಂಡಿಕೊಂಡರು.
ಇತ್ತೀಚಿಗೆ ಸಾಕ್ಷ್ಯಚಿತ್ರದ ಹಿನ್ನಲೆಯಲ್ಲಿ ಆಗಿನ ಆಸ್ಟ್ರೇಲಿಯಾ ಕ್ಯಾಪ್ಟನ್ ಟಿಮ್ ಪೈನ್ ಅಂದಿನ ಪಂದ್ಯದ ಬಗ್ಗೆ ಮಾತನಾಡಿದ್ದಾರೆ.
ಅಡಿಲೈಡ್ ಟೆಸ್ಟ್ ನಲ್ಲಿ ರಹಾನೆ ವಿರಾಟ್ ಕೊಹ್ಲಿ ಅವರನ್ನ ರನೌಟ್ ಮಾಡಿದ್ದರು.

ಇದನ್ನ ಪೈನ್ ನೆನಪು ಮಾಡಿಕೊಂಡಿದ್ದು, ವಿರಾಟ್ ಆಗ 30ರ ಆಸುಪಾಸಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಲೈಟಿಂಗ್ ಇರಲಿಲ್ಲ.
ಪ್ಲೆಡ್ ಲೈಟ್ ನಲ್ಲಿ ಬ್ಯಾಟಿಂಗ್ ಮಾಡೋದು ತುಂಬಾ ಕಷ್ಟ. ಆದ್ರೂ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.
ಕೊಹ್ಲಿ ಕ್ರೀಸ್ ನಲ್ಲಿ ಹೆಚ್ಚು ಕಾಲ ಇದ್ದಷ್ಟೂ ನಮಗೆ ನಷ್ಟವಾಗುತ್ತಿತ್ತು. ಮತ್ತೊಂದು ಕಡೆ ರಹಾನೆ ಕೂಡ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು.
ಇಬ್ಬರೂ ಬ್ಯಾಟ್ ಬೀಸುವಾಗ ಪಂದ್ಯ ನಮ್ಮ ಕೈ ಮೀರಿತ್ತು. ಅಂತಹ ಸಂದರ್ಭದಲ್ಲಿ ರಹಾನೆ, ವಿರಾಟ್ ಕೊಹ್ಲಿ ಅವರನ್ನ ರನ್ ಔಟ್ ಮಾಡಿದರು.
ನಮ್ಮ ಮಟ್ಟಿಗೆ ಅದೇ ನಮ್ಮ ಗೇಮ್ ಚೇಜಿಂಗ್ ಮ್ಯೂಮೆಂಟ್. ನಾವು ಕೊಹ್ಲಿ ಔಟ್ ಆದ್ರೆ ಸಾಕು ಎಂದುಕೊಂಡಿದ್ವಿ. ಯಾಕೆಂದರೇ ವಿರಾಟ್ ಕೊಹ್ಲಿ ಬೆಸ್ಟ್ ಪ್ಲೇಯರ್ ಎಂದಿದ್ದಾರೆ.








