ನಾಲ್ಕು ವರ್ಷಗಳ ಹಿಂದಿನ ಆ ಒಂದು ಸಂದೇಶ ..ಟೀಮ್ ಪೇನ್ .ಪಟ್ಟಕ್ಕೆ ಕುತ್ತು…
ಟಿ-20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ ಸಂಭ್ರಮಲ್ಲಿ ತೇಲಾಡುತ್ತಿದೆ. ಇದರ ಬೆನ್ನಲ್ಲೇ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಅವರು ತನ್ನ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಮತ್ತು ಅಶ್ಲೀಲ ಫೋಟೋ ಕಳಿಸಿದ್ದ ಟೀಮ್ ಪೇನ್ ಅವರು ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಯ್ತು.
2017ರಲ್ಲಿ ಟೀಮ್ ಪೇನ್ ಅವರು ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಮತ್ತು ಅಶ್ಲೀಲ ಫೋಟೋವನ್ನು ಕಳುಹಿಸಿದ್ದರು.
ಈ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆ ಕೂಡ ನಡೆಸಿತ್ತು. ತನಿಖೆಯಲ್ಲಿ ಟೀಮ್ ಪೇನ್ ಮಾಡಿರೋದು ತಪ್ಪು ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ನೀತಿ ಸಂಹಿತೆಗೆ ವಿರುದ್ಧವಾಗಿಲ್ಲ.
ಹೀಗಾಗಿ ತಪ್ಪನ್ನು ಒಪ್ಪಿಕೊಂಡ ಟೀಮ್ ಪೇನ್ ಅವರು ನಾಯಕನ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ, ಆದ್ರೆ ಆಟಗಾರನಾಗಿ ತಂಡದಲ್ಲಿರಲಿದ್ದಾರೆ.
ಈ ಘಟನೆಯಿಂದ ನನಗೆ ಆಗ ತುಂಬಾ ಮುಜುಗರವಾಗಿತ್ತು. ಈಗಲೂ ಇದೆ. ಈ ಕುರಿತಂತೆ ನನ್ನ ಹೆಂಡತಿ ಮತ್ತು ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದೇನೆ.
ಈ ಘಟನೆಯ ಬಗ್ಗೆ ನನಗೆ ಅವರು ನೀಡಿದ್ದ ಬೆಂಬಲ ಮತ್ತು ಕ್ಷಮೆಗೆ ನಾನು ಅಭಾರಿಯಾಗಿದ್ದೇನೆ ಎಂದು ಟೀಮ್ ಪೇನ್ ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಇಂತಹ ಘಟನೆಗಳನ್ನು ಮತ್ತು ನಡವಳಿಕೆಗಳನ್ನು ಕ್ಷಮಿಸುವುದಿಲ್ಲ.
ಟೀಮ್ ಪೇನ್ ಅವರ ರಾಜೀನಾಮೆಯ ನಿರ್ಧಾರವನ್ನು ಗೌರವಿಸುತ್ತೇವೆ. ಇದೀಗ ಮುಂದಿನ ನಾಯಕನನ್ನು ಸದ್ಯದಲ್ಲೇ ಆಯ್ಕೆ ಮಾಡಲಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಟೀಮ್ ಪೇನ್ ಅವರು ಕಳೆದ ನಾಲ್ಕು ವರ್ಷಗಳಿಂದ ಆಸ್ಟ್ರೆಲಿಯಾ ಟೆಸ್ಟ್ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇದೀಗ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪ್ಯಾಟ್ ಕಮಿನ್ಸ್ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಇದೀಗ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ದದ ಆಶಷ್ ಸರಣಿಗೆ ರೆಡಿಯಾಗಬೇಕಿದೆ.
ಒಂದಂತೂ ಸತ್ಯ, ಕ್ರಿಕೆಟ್ ಆಸ್ಟ್ರೇಲಿಯಾದ ಕೆಲವೊಂದು ನಿರ್ಧಾರಗಳು ತುಂಬಾನೇ ಕಠಿಣವಾಗಿರುತ್ತವೆ.
ಆಟಗಾರರು ನೀತಿ ಸಂಹಿತೆಯನ್ನು ಉಲ್ಲಂಘಣೆ ಮಾಡಿದ್ರೆ ಅಥವಾ ಶಿಸ್ತು, ನಡವಳಿಕೆಗಳಲ್ಲಿ ಮೀತಿ ಮೀರಿ ವರ್ತನೆ ಮಾಡಿದ್ರೆ ಹಿಂದೆ ಮುಂದೆ ನೋಡದೇ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.