Tim Southee : ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ ಸಾಧನೆ ಮಾಡಿದ ಕಿವೀಸ್ ವೇಗಿ
ನ್ಯೂಜಿ಼ಲೆಂಡ್ ಕ್ರಿಕೆಟ್ ತಂಡದ ಅನುಭವಿ ಆಟಗಾರ ಟಿಮ್ ಸೌಥಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಹತ್ವದ ಮೈಲುಗಲ್ಲು ದಾಟುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಿಮ್ ಸೌಥಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ನ 700ನೇ ವಿಕೆಟ್ ಪಡೆದು ಮಿಂಚಿದರು.
ಆ ಮೂಲಕ ಈ ಸಾಧನೆ ಮಾಡಿದ ಕಿವೀಸ್ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಸೌಥಿ ಪಾತ್ರರಾದರು. 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ನ ಬೆನ್ ಡಕ್ಕೆಟ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು.
ನ್ಯೂಜಿ಼ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿರುವ ಟಿಮ್ ಸೌಥಿ, ತಮ್ಮ ಸರ್ವಶ್ರೇಷ್ಠ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ಗಳ ಸಾಧನೆ ಮಾಡುವ ಮೂಲಕ ಅತ್ಯಧಿಕ ವಿಕೆಟ್ ಪಡೆದ ಕಿವೀಸ್ನ ನಂ.1 ಬೌಲರ್ ಎನಿಸಿದ್ದರೆ. ಇವರ ನಂತರದ ಸ್ಥಾನದಲ್ಲಿ ಡೆನಿಯಲ್ ವೆಟ್ಟೋರಿ ಹಾಗೂ ಸರ್ ರಿಚರ್ಡ್ ಹ್ಯಾಡ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಕಿವೀಸ್ ಮತ್ತೋರ್ವ ಪ್ರಮುಖ ವೇಗಿ ಟ್ರೆಂಟ್ ಬೋಲ್ಟ್, 578 ವಿಕೆಟ್ಗಳ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕಿವೀಸ್ನ ಪ್ರಮುಖ ಬೌಲರ್ ಆಗಿರುವ ಸೌಥಿ, ತಮ್ಮ ತಂಡಕ್ಕೆ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಪ್ರಶಸ್ತಿ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಸದ್ಯ ನ್ಯೂಜಿ಼ಲೆಂಡ್ನ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಟಿಮ್ ಸೌಥಿ ತಂಡವನ್ನ ಮುನ್ನಡೆಸುತ್ತಿದ್ದಾರೆ.
ಟಿಮ್ ಸೌಥಿ ವಿಕೆಟ್ ಸಾಧನೆ:
ಏಕದಿನ – 210
ಟೆಸ್ಟ್ – 356
ಟಿ20 – 134
Tim Southee , Kiwis pacer who has achieved 700 wickets in international cricket








