ಇಂಗ್ಲೆಂಡ್- ಆಸ್ಟ್ರೇಲಿಯಾ Ashes ಕಾಳಗಕ್ಕೆ ಮುಹೂರ್ತ ಫಿಕ್ಸ್ Ashes saaksha tv
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು, ವಿಶ್ವಕಪ್ ಗೆಲ್ಲದೇ ಇದ್ದರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಆ್ಯಶಸ್ ಸೋಲನ್ನು ಮಾತ್ರ ಎಂದೂ ಅರಿಗಿಸಿಕೊಳ್ಳುವುದಿಲ್ಲ.
ಅಷ್ಟರ ಮಟ್ಟಿಗೆ ಈ ಆ್ಯಶಸ್ ಕರಂಡಿಕೆಯ ಪ್ರತಿಷ್ಠೆ ಇದೆ. ಆ್ಯಶಸ್ ಸೋಲು, ಕೇವಲ ಸೋಲಾಗಿರುವುದಿಲ್ಲ.
ಬದಲಾಗಿ ಅದು ಹೀನಾಯ ಅವಮಾನವಾಗಿರುತ್ತದೆ. ಅದರಲ್ಲೂ ಇಂಗ್ಲೆಂಡ ಮತ್ತು ಆಸ್ಟ್ರೇಲಿಯಾ ತಂಡಗಳು ಆ್ಯಶಸ್ ಸೋಲನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ.
ಈ ಬಾರಿಯ ಆ್ಯಶಸ್ ಸರಣಿಗೆ ಸಿದ್ಧತೆಗಳು ನಡೆಯುತ್ತಿವೆ. ಬ್ರಿಸ್ಬೇನ್, ಆಡಿಲೇಡ್, ಮೆಲ್ಬರ್ನ್, ಸಿಡ್ನಿ ಮತ್ತು ಪರ್ತ್ನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ.
ಮೊದಲ ಟೆಸ್ಟ್ ಪಂದ್ಯ ಆರಂಭವಾಗುವುದನ್ನೇ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳು ಕೂಡ ಪ್ರತಿಷ್ಠೆಯ ಹೋರಾಟಕ್ಕೆ ಸಿದ್ಧವಾಗಿವೆ.
ಮೊದಲ ಟೆಸ್ಟ್: ಬ್ರಿಸ್ಬೇನ್- ಡಿಸೆಂಬರ್ 8- ಡಿಸೆಂಬರ್ 12
2ನೇ ಟೆಸ್ಟ್: ಆಡಿಲೇಡ್- ಡಿಸೆಂಬರ್ 16- ಡಿಸೆಂಬರ್ 20
3ನೇ ಟೆಸ್ಟ್: ಮೆಲ್ಬರ್ನ್: ಡಿಸೆಂಬರ್ 26- ಡಿಸೆಂಬರ್ 30
4ನೇ ಟೆಸ್ಟ್: ಸಿಡ್ನಿ- ಜನವರಿ 05- ಜನವರಿ 09
5ನೇ ಟೆಸ್ಟ್: ಪರ್ತ್- ಜನವರಿ 18 – ಜನವರಿ 22