ಪಾಸಿಟಿವ್ ( ಸಕಾರಾತ್ಮಕ ) ಆಲೋಚನೆಗಳನ್ನ ಹೇಗೆ ರೂಢಿಸಿಕೊಳ್ಳಬೇಕು… ಈ ಟಿಪ್ಸ್ ಅನುಸರಿಸಿ..!
ಪಾಸಿಟಿವ್ ( ಧನಾತ್ಮಕ , ಸಕಾರಾತ್ಮಕ ಮನೋಭಾವ – ಭಾವನೆ ). ಪಾಸಿಟಿವ್ ನೆಸ್… ಧನಾತ್ಮಕ ಚಿಂತನೆ. ಬಿ ಪಾಸಿಟಿವ್. ಯಾವಾಗಲೂ ಪಾಸಿಟಿವ್ ಆಗಿ ಇರಿ. ಪಾಸಿಟಿವ್ ಮ¸ನಸ್ಥಿತಿಯಿಂದ ಇದ್ರೆ ಎಲ್ಲವೂ ಸರಿ ಹೋಗುತ್ತೆ. ಹೀಗೆ ಸಾಮಾನ್ಯವಾಗಿ ಹೇಳೋದನ್ನ Pನಾವು ಕೇಳಿರುತ್ತೇವೆ. ಆದ್ರೆ ಎಷ್ಟೇ ಪ್ರಯತ್ನ ಪಟ್ರೂ ಕೆಲವೊಮ್ಮೆ ನಕಾರಾತ್ಮಕ ಚಿಂತನೆ ಮನಸ್ಸಿಗೆ ಬಂದೇ ಬಿಡುತ್ತೆ. ಲಜಿಗುಪ್ಸೆ ಹುಟ್ಟುತ್ತೆ. ಯಾವುದೋ ಒಂದು ಕಾರಣಕ್ಕೆ ನಾವು ನೆಗೆಟಿವ್ ಆಗಿ ಆಲೋಚಿಸೋದಕ್ಕೆ ಶುರು ಮಾಡ್ತೇವೆ. ಆದ್ರೆ ಅಂತಹ ಸಂದgರ್ಭದಲ್ಲೂ ಸಹ ಮನಸನ್ನ ಹೇಗೆ ಧನಾತ್ಮಕ ಚಿಂತನೆಯಿAದ ಇಟ್ಟಿರಬೇಕು. ಅಂದ್ರೆ ಧನಾತ್ಮಕ ಚಿಂತನೆ ಪಾಸಿಟಿವ್ ಆಗಿ ಇರಬೇಕು. ಅದ್ರಿಂದ ಎಷ್ಟೇ ನೆಗೆಟಿವ್ ಆಲೋಚನೆ ಇದ್ರು ಹೋಗಿ ನೆಮ್ಮದಿ ಸಿಗುತ್ತೆ. ಒಳ್ಳೊಳ್ಳೆ ಆಲೋಚನೆಗಳು ಬರುತ್ತವೆ. ಜೊತೆಗೆ ಸಮಸ್ಯೆಗಳಿಗೆ ಪರಿಹಾರದ ದಾರಿ ಹುಡುಕಿಕೊಳ್ಳುವ ಜೊತೆಗೆ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಆಗಿ ನಮ್ಮ ಮನಸ್ಸು ಸದಾ ಒಳ್ಳೆಯ ವಿಚಾರಗಳನ್ನೆ ಯೋಚಿಸುತ್ತೆ. ಅಲ್ಲದೇ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಬೆಳೆಯುತ್ತೆ.
ಆದ್ರೆ ನಾವು ಯಾವ ರೀತಿ ಪಾಸಿಟಿವ್ ಆಗಿರಬಹುದು. ಅದಕ್ಕೆ ಕೆಲ ಟಿಪ್ಸ್ ಗಳನ್ನ ನಾವು ಇಲ್ಲಿ ತಿಳಿಯೋಣ.
1. ಸದಾ ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಬೇಕು.. ಹೀಗೆ ಆದಲ್ಲಿ ಎಲ್ಲಾ ವಸ್ತುಗಳಿಂದ ಹಿಡಿದು ಪ್ರತಿ ವಿಚಾರದ ಮೇಲೂ ತಮ್ಮ ಜೀವನದಲ್ಲಿ ನಾವು ಅದಕ್ಕೆ ಕೃತಜ್ಞರಾಗಿದ್ದಾಗ ನಮ್ಮ ಮನಸ್ಸಿಗೆ ತೃಪ್ತಿಯ ಬಾವನೆ ಬರುತ್ತೆ. ಇದು ಅತೃಪ್ತೆಯನ್ನೂ ಹೋಗಲಾಡಿಸಲು ಸಹಾಯ ಮಾಡುವ ಜೊತೆಗೆ ಮನಸನ್ನ ಸದಾ ಧನಾತ್ಮಕವಾಗಿರಲು ಸಹಾಯ ಮಾಡುತ್ತದೆ.
2. ನೀವು ಒಂದು ಜರ್ನಲ್ ಅಥವ ಡೈರಿಯನ್ನ ಬರೆಯಲು ಪ್ರಾರಂಭಿಸಿ : ನಿಮ್ಮ ಜೀವನದಲ್ಲಿ ಪ್ರತಿನಿತ್ಯ ನಡೆಯುವ ಕೇವಲ ಒಳಿತನ್ನೇ ಆ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ನಿಮ್ಮೆ ದೈನಂದಿನ ಜೀವನದಲ್ಲಿ ನಿಮಗೆ ಹೊತ್ತೊತ್ತಿಗೆ ಸಿಕ್ಕ ಊಟ ತಿಂಡಿ ಇಂದ ಹಿಡಿದು ಪ್ರತಿ ಹ್ಯಾಪಿ ಮೂಮೆಂಟ್ಸ್ ಗಳನ್ನ ನೆನಯುತ್ತಾ ಡೈರಿಯಲ್ಲಿ ಬರೆದಿಟ್ಟು ನೋಡಿ ನಿಮ್ಮ ಸುತ್ತಲೂ ಪಾಸಿಟಿವ್ ವೈಬ್ಸ್ ನಿಮಗೆ ಅನುಭವ ಆಗುತ್ತದೆ.
ನಾಳೆ ಶ್ರೀ ಆಂಜನೇಯ ಸ್ವಾಮಿಯ ಅಷ್ಟೋತ್ತರ ಮಂತ್ರವನ್ನು ವ್ಯಾಪಾರ,ವ್ಯವಹಾರದ ಬೆಳವಣಿಗಾಗಿ ಜಪಿಸಿ ಶುಭವಾಗುತ್ತದೆ..
3. ಹಾಸ್ಯ : ನೀವು ನಿಮ್ಮನ್ನ ಮನೋರಂಜಿಸಿಕೊಳ್ಳುವ ಜೊತೆಗೆ ನಿಮ್ಮ ಸುತ್ತಲೂ ಇರುವವರನ್ನ ನಗಿಸು ಪ್ರಯತ್ನ ಮಾಡಿ. ಅದರಿಂದ ನೀವಷ್ಟೇ ಅಲ್ದೇ ನಿಮ್ಮ ಸುತ್ತಲೂ ಪಾಸಿಟಿವ್ ವೈಬ್ಸ್ ಸೃಷ್ಟಿಯಾಗತ್ತೆ.
4. ಯಾವಾಗಲೂ ಒಳ್ಳೆಯ ವಿಚಾರಗಳ ಬಗ್ಗೆಯೇ ಗಮನಹರಿಸಿ. ಕಷ್ಟ ಬಂದಾಗ ಅದನ್ನ ಎದುರಿಸಿ. ಅದನ್ನ ಬಿಟ್ಟು ಇದು ಆಗಲ್ಲ. ಇದೇ ಜೀವನ ಅಂದ್ಕೊAಡ್ರೆ ಏನೂ ಸಾಧನೆ ಮಾಡೋದಕ್ಕೆ ಆಗಲ್ಲ. ಹಾಗೆ ಅನ್ನಿಸಿದಾಗ ನೀವು ಒಂದು ಅಂಶವನ್ನ ಸದಾ ನೆನಪಿಟ್ಟುಕೊಳ್ಳಿ. ಸವಾಲುಗಳು ಜೀವನದ ಒಂದು ಭಾಗವೇ ಹೊರತು ಅದೇ ಜೀವನವಲ್ಲ.
5. ನೀವು ಸದಾ ಪಾಸಿಟಿವ್ ಯೋಚನೆ ಮಾಡುವವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಇದರಿಂದ ನಿಮ್ಮ ಯೋಚನೆಯೂ, ನಿಮ್ಮ ಆಲೋಚನೆಯೂ ಅವರಂತೆಯೇ ಬದಲಾಗುತ್ತೆ. ಜೊತೆಗೆ ನೀವು ಪಾಸಿಟಿವ್ ಆಗಿಯೇ ಇರಲು ಶುರು ಮಾಡ್ತೀರಿ. ಅದಾಗದ ಪಕ್ಷದಲ್ಲಿ ನಿಮ್ಮ ಜೊತೆಯಾಗಿರುವವರಾದರೂ ನಿಮ್ಮನ್ನ ಧನಾತ್ಮಕ ಭಾಗಕ್ಕೆ ಕರೆದೊಯ್ಯುವ ಪ್ರಯತ್ನ ಮಾಡ್ತಾರೆ.
6. ನಿಮಗೆ ನೀವೇ ಸಕಾರಾತ್ಮಕವಾಗಿ ಮಾತನಾಡುವುದನ್ನ ರೂಢಿಸಿಕೊಳ್ಳಿ, ಬೆಳೆಸಿಕೊಳ್ಳಿ. ಇದು ನನ್ನ ಕೈಯಲ್ಲಿ ಆಗಲ್ಲ ಅಂದ್ಕೋಬೇಡಿ. ನಾನು ಇದನ್ನ ಮಾಡಬಹುದು. ನನ್ನಿಂದ ಇದು ಸಾಧ್ಯವಾಗದೇ ಇದ್ರು ಮುಂದೆ ಹೇಗೆ ನಾನು ಇದನ್ನ ಸಾಧಿಸಬಹುದು ಈ ರೀತಿ ಆಲೋಚನೆ ನಿಮ್ಮನ್ನ ಪಾಸಿಟಿವ್ ಆಗಿ ಇರಿಸಿ ನಿಮ್ಮ ಸಾಧನೆಯ ದಾರಿಗೆ ಹೂದಾರಿಯಾಗುತ್ತೆ.
7.. ನೀವು ಪಾಸಿಟಿವ್ ಆಗಿರಲು ಬಯಸಿದಾಗ ಮೊದಲು ನೀವು ನಿಮ್ಮ ನೆಗೆಟಿವಿಟಿ ನಿಮ್ಮ ವೀಕ್ ನೆಸ್ … ನೀವು ಯಾವ ಕಕ್ಷೇತ್ರದಲ್ಲಿ ಯಾವ ಜಾಗದಲ್ಲಿ ಯಾವ ವಿಚಾರದಲ್ಲಿ ನೆಗೆಟಿವ್ ಆಗಿ ಆಲೋಚನೆ ಮಾಡ್ತೀರಾ ಅನ್ನೋದನ್ನ ಮೊದಲು ಗುರುತಿಸಿ ಆನಂತರ. ಅದನ್ನ ಸರಿ ಪಡಿಸಿಕೊಳ್ಳೋ ದಾರಿ ಹುಡುಕಿ.
8. ಪ್ರತಿನಿ ಆರಂಭಿಸುವ ಮುನ್ನ ಒಂದು ಪಾಸಿಟಿವ್ ನೋಟ್ ಬರೆಯುವ ಅಭ್ಯಾಸ, ಅಥವ, ಓದುವ ಅಭ್ಯಾಸ ಮಾಡಿಕೊಳ್ಳಿ. ಫ್ರೆಶ್ ಆಗಿ ಆರಂಭಿಸಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel