Tipu – Savarkar | ಟಿಪ್ಪು –ಸಾವರ್ಕರ್ ವಾದ – ವಿವಾದ : ಸಿಎಂ ಹೇಳಿದ್ದೇನು ?
ಹುಬ್ಬಳ್ಳಿ : ಸಾರ್ವಕರ್ ಬಗ್ಗೆ ಇಂದಿರಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು-ಸಾರ್ವಕರ್ ಪರ ವಿರೋಧ ಇದೆ. ವೈಚಾರಿಕ ಭಿನ್ನಾಭಿಪ್ರಾಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಹಾವೇರಿ ಜಿಲ್ಲಾ ಪ್ರವಾಸ ಮಾಡ್ತಿದ್ದೇನೆ. ಅನೇಕ ಅಭಿವೃದ್ಧಿ ಕಾರ್ಯಕ್ರಮ ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಮೊಟ್ಟೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದೇನೆ. ಅದು ತನೀಖೆಯಾಗಬೇಕು. ಒಂದು ಘಟನೆಯನ್ನ ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕು ಎನ್ನೋದು ಆಯಾ ರಾ ಜಕೀಯ ಪಕ್ಷಕ್ಕೆ ಬಿಟ್ಟದ್ದು.
ಆದ್ರೆ ರಾಜ್ಯದಲ್ಲಿ ಶಾಂತಿ ಮುಖ್ಯ. ಸಾರ್ವಕರ್ ಬಗ್ಗೆ ಇಂದಿರಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು-ಸಾರ್ವಕರ್ ಪರ ವಿರೋಧ ಇದೆ. ವೈಚಾರಿಕ ಭಿನ್ನಾಭಿಪ್ರಾಯ ಇದೆ ಎಂದು ಸಿಎಂ ಹೇಳಿದ್ದಾರೆ.
ಮಹದಾಯಿ ಯೋಜನೆ ನೆನೆಗುದಿಗೆ ಬಿದ್ದಿಲ್ಲ. ಈಗಾಗಲೇ ಬಹಳಷ್ಟು ಪ್ರಗತಿಯಾಗಿದೆ. ಅರಣ್ಯ ಇಲಾಖೆಯ ಅನುಮತಿ ಅಂತಿಮ ಘಟ್ಟದಲ್ಲಿದೆ.
ಕೇಂದ್ರ ಜಲ ಆಯೋಗದಿಂದ ಪೈನಲ್ ಕ್ಲಿಯರಯನ್ಸ್ ಬರಬೇಕಿದೆ. ಎರಡೂ ಬಂದ ತಕ್ಷಣವೇ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.