Tipu Sultan | ಟಿಪ್ಪು ಕನ್ನಡ ನಾಡಿನ ಸ್ವಾಭಿಮಾನದ ಸಂಕೇತ
ಮೈಸೂರು : ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಸ್ವಾಭಿಮಾನದ ಸಂಕೇತವಾಗಿದೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಟಿಪ್ಪು ನಿಜ ಕನಸು ಪುಸ್ತಕದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಪ್ಪ.
ಆತ ಅಡ್ನಾಡಿ ಕಾರ್ಯಪ್ಪ. ಟಿಪ್ಪು ಬಗ್ಗೆ ಆತ ಪುಸ್ತಕ ಬರೆಯಲು ಟಿಪ್ಪು ಕಾಲದಲ್ಲಿ ಹುಟ್ಟಿದ್ದನಾ ? ಈ ಪುಸ್ತಕವನ್ನು ನಾನು ಖಂಡಿಸುತ್ತೇನೆ ಎಂದರು.
ಟಿಪ್ಪು ಸುಲ್ತಾನ್ ಕನ್ನಡ ನಾಡಿನ ಸ್ವಾಭಿಮಾನದ ಸಂಕೇತವಾಗಿದೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಇತಿಹಾಸವನ್ನು ತಿರುಚುವ ಕೆಲಸ ಯಾರು ಮಾಡಬಾರದು.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಆಡಳಿತ, ಧೈರ್ಯ, ಶೌರ್ಯ ಕೆಚ್ಚೆದೆಯ ಹೋರಾಟಗಳನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದರು.