ಮುಖ್ಯ ಶಿಕ್ಷಕರಿಂದ ಕಿರುಕುಳ ಆರೋಪ – ಶಾಲಾ ಮಕ್ಕಳಿಂದ ಪ್ರತಿಭಟನೆ
ಶಾಲಾ ಮುಖ್ಯೋಪಧ್ಯಾಯರ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಗಳು ಬೆಳ್ಳಂ ಬೆಆಳಿಗ್ಗೆ ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗಜಿಲ್ಲೆ ಸಾಗರ ತಾಲೋಕು ಆನಂದಪುರ ಯಡ್ಡೇಹಳ್ಳಿಯಲ್ಲಿ.
ಆನಂದಪುರ ಯೆಡ್ಡೆಹಳ್ಳಿಯಲ್ಲಿರುವ ಮೋರಾರ್ಜಿ ದೆಸಾಯಿ ವಸತಿ ಶಾಲೆಯ ಮಕ್ಕಳು ಬೆಳಗಿನ ಉಪಹಾರವನ್ನ ತ್ಯಜಿಸಿ ಮುಖ್ಯ ಶಿಕ್ಷಕರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದರು. ಜಿಲ್ಲಾಧಿಕಾರಿಗಳು ಶಾಸಕರು ಸ್ಥಳಕ್ಕೆ ಬರಬೇಕು ಅಲ್ಲಿಯವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದು ಧರಣಿ ಕೂತಿದ್ದರು. ಕಾರಣ……
ತರಗತಿಯಲ್ಲಿ ಮಾತನಾಡುವ ವಿಷಯಕ್ಕೆ ರೂಮಿನಲ್ಲಿ ಕೂಡಿಹಾಕಿ ಹೊಡೆಯುತ್ತಾರೆ. ಊಟದಲ್ಲಿ ಉಪ್ಪು ಇಲ್ಲ ಎಂದರೆ…ಮಾರನೆ ದಿನಾ ವಿಪರೀತ ಉಪ್ಪು ಹಾಕುತ್ತಾರೆ. ಊಟದಲ್ಲಿ ಹುಳುಗಳು ಹಾಗೆ ಇರುತ್ತವೆ, ನಮಗೆ ಈ ಮುಖ್ಯೋಪಧ್ಯಾಯರು ಬೇಡ ನ್ಯಾಯ ಕೊಡಿಸಿ ಎಂದು ಮಕ್ಕಳು ಪ್ರತಿಭಟನೆ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರು, “ನನ್ನ ವಿರುದ್ದ ಪಿತೂರಿ ನಡೆಯುತ್ತಿದೆ. ನಾನು ನನ್ನ ಕರ್ತವ್ಯವನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ. ಕೆಲವು ಶಿಕ್ಷಕರು ಕುಮ್ಮಕ್ಕು ಕೊಟ್ಟು ಈ ರೀತಿ ಮಾಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.








