ತಿರುಪತಿಯಲ್ಲಿ ಭಿಕ್ಷೆ ಬೇಡುತ್ತಿದ್ದವನ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ ಹಣ
ಹೈದರಾಬಾದ್ : ತಿರುಪತಿ ವೆಂಕಟೇಶ್ವರ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಬರೋಬ್ಬರಿ 10 ಲಕ್ಷರೂ ಪತ್ತೆಯಾಗಿದೆ. ಭಿಕ್ಷುಕನ ಮನೆಯಲ್ಲಿ ಇಷ್ಟೊಂದು ಹಣ ನೋಡಿ ಸ್ವತಃ ಅಧಿಕಾರಿಗಳೇ ದಂಗಾಗಿದ್ದಾರೆ.
ಶೇಷಾಚಲ ನಗರದ ನಿವಾಸಿಯಾಗಿರುವ ಶ್ರೀನಿವಾಸ್, ಪ್ರತಿ ನಿತ್ಯ ತಿರುಪತಿ ದೇವರ ದರ್ಶನ ಪಡೆಯಲು ಬರುತ್ತಿದ್ದವರ ಬಳಿ ಭಿಕ್ಷೆ ಬೇಡುತ್ತಿದ್ದನು.
ಕಳೆದ ವರ್ಷ ಶ್ರೀನಿವಾಸ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದನು. ಹೀಗಾಗಿ ಆತನ ಕುಟುಂಬದ ಸದಸ್ಯರು ಯಾರೂ ಇಲ್ಲವೆಂಬುದನ್ನು ಅರಿತ ಟಿಟಿಡಿ ಅಧಿಕಾರಿಗಳು, ಆತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ 2 ಟ್ರಕ್ ಬಾಕ್ಸ್ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಇರುವುದು ಕಂಡುಬಂದಿದೆ.
ಈ ನೋಟುಗಳನ್ನು ಎಣಿಸಿದಾಗ ಸುಮಾರು 10 ಲಕ್ಷ ರೂ. ಇರುವುದು ಗೊತ್ತಾಗಿದೆ. ಇದರಲ್ಲಿ 1,000 ಮುಖಬೆಲೆಯ ರದ್ದಾದ ನೋಟುಗಳು ಕೂಡ ಇವೆ.