ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿ ದಿನ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಉತ್ತರ ಭಾರತದಲ್ಲೂ ಸಹಸ್ರ ಭಕ್ತ ಸಮೂಹವನ್ನು ಹೊಂದಿರೋ ತಿಮ್ಮಪ್ಪ, ಇನ್ಮೇಲೆ ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ. ಹೌದು ಉತ್ತರ ಭಾರತದ ಜನತೆಗೆ ಅನುಕೂಲವಾಗಲು ಜಮ್ಮು ಕಾಶ್ಮೀರದಲ್ಲಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣಕ್ಕೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ತಾತ್ವಿಕ ಒಪ್ಪಿಗೆ ನೀಡಿದೆ. ದೇಗುಲ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೂ ಗ್ರೀನ್ ಸಿಗ್ನಲ್ ನೀಡಿದ್ದು, ಜಮ್ಮು- ಕುತ್ರಾ ರಾಷ್ಟ್ರೀಯ ಹೆದ್ದಾರಿ ಬಳಿ 100 ಎಕರೆ ಜಮೀನನ್ನೂ ಮಂಜೂರು ಮಾಡಿದೆ. ಈ ದೇಗುಲವನ್ನು ವೈಷ್ಣೋದೇವಿ ದೇಗುಲದ ಹತ್ತಿರದಲ್ಲೇ ನಿರ್ಮಾಣ ಮಾಡಲಿದ್ದು, ಇನ್ನೆರಡು ವರ್ಷಗಳಲ್ಲಿ ದೇಗುಲ ನಿರ್ಮಾಣ ಕಾರ್ಯ ಮುಗಿಯಲಿದೆ. ಇನ್ನು ದೇಗುಲದಲ್ಲಿ ವೇದಾಧ್ಯಯನ ಶಾಲೆಯನ್ನು ತೆರೆದು ವೇದಗಳ ಮಹತ್ವವನ್ನು ಮತ್ತಷ್ಟು ಪ್ರಚಾರ ಮಾಡಲು ಟಿಟಿಡಿ ನಿರ್ಧರಿಸಿದೆ.
ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಾದ ರಾಜಕೀಯ ಶಾಶ್ವತವಲ್ಲ, ಯಾರಪ್ಪನ ಆಸ್ತಿನೂ ಅಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ - ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ....








