ಮೂರನೇ ಮುಗುವಿಗೆ ಜನ್ಮ ನೀಡಿದರೆ ಸರಕಾರ ನೀಡುತ್ತೆ ಬಂಪರ್ ಗಿಪ್ಟ್
ಚೀನಾ: ಚೀನಾದಲ್ಲಿ ಹೊಸ ಯೋಜನೆಯೊಂದು ಪ್ರಾರಂಭವಾಗಿದ್ದು, ದಂಪತಿ ಮೂರನೇ ಮಗುವಿಗೆ ಜನ್ಮ ನೀಡಿದರೆ ವಿಶೇಷ ಬಹುಮಾನ ನೀಡಲು ಮುಂದಾಗಿದೆ.
ಹೌದು ಚೀನಾ ‘ಮೂರನೇ ಮಗು’ ಯೋಜನೆಯನ್ನು ಜಾರಿಗೆ ತರುತ್ತಿದೆ. ಮೂರನೇ ಮಗು ಪಡೆದರೆ ದಂಪತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಖಾಸಗಿ ಕಂಪನಿಯೊಂದು ಆಫರ್ ಕೊಟ್ಟಿದೆ.
ಇದಕ್ಕೆ ಕಾರಣ 2019ರಲ್ಲಿ ಚೀನಾದಲ್ಲಿದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ ಅಂತ ಇತ್ತೀಚಿಗೆ ಬಿಡುಗಡೆ ಮಾಡಲಾದ 7ನೇ ರಾಷ್ಟ್ರೀಯ ಜನಗಣತಿ ವರದಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಿದೆ. ಹೀಗಾಗಿ ಚೀನಾದ ರಾಜಧಾನಿ ಬೀಜಿಂಗ್ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಸಂಸ್ಥೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ ಬರೋಬ್ಬರಿ 90,000 ಯುವಾನ್ ನಗದು ಹಣ ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ 11 ಲಕ್ಷ ರೂಪಾಯಿಗಳ ಪ್ರೋತಾಹ ಧನ ನೀಡಲಾಗುತ್ತದೆ
11 ಲಕ್ಷ ಪ್ರೋತ್ಸಾಹ ಧನ ಅಷ್ಟೇ ಅಲ್ಲ, ಆಕರ್ಷಕ ರಜೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳು 3ನೇ ಮಗು ಪಡೆದರೆ ಒಂದು ವರ್ಷ ವೇತನ ಸಹಿತ ರಜೆ ನೀಡುತ್ತದೆ. ಇನ್ನು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ವೇತನ ಸಹಿತ ರಜೆಯನ್ನು ಕೂಡಾ ನೀಡುತ್ತಿದೆ.
ಅಲ್ಲದೇ ತನ್ನ ಉದ್ಯೋಗಿಗಳು ಮೊದಲು ಹಾಗೂ 2ನೇ ಮಗುವನ್ನು ಪಡೆದರೂ ಸಹ ಅವರಿಗೆ ಆಕರ್ಷಕ ಗಿಫ್ಟ್ ನೀಡಲು ಈ ಕಂಪನಿ ಯೋಚಿಸಿದೆ. ಅದರ ಪ್ರಕಾರ ಎರಡನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳು 60,000 ಯುವಾನ್ ನಗದು ಹಣ, ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 7 ಲಕ್ಷ ರೂಪಾಯಿ ನೀಡಲಿದೆ. ಇನ್ನು ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದರೂ ಅವರಿಗೆ 30,000 ಯುವಾನ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 3.50 ಲಕ್ಷ ಪಡೆಯಲಿದ್ದಾರೆ.
ಇನ್ನೂ ಚೀನಾ ಜನಸಂಖ್ಯೆಯನ್ನು ನಿಯಂತ್ರಿಸಲು 1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಜನಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಮೇ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಇದೀಗ ಅದನ್ನು ಉತ್ತೇಚಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.