ಬೆಂಗಳೂರು : ಜೂನ್ 29 ರಂದು ವಿಧಾನ ಪರಿಷತ್ ಚುನಾವಣೆಗೆ ಮುಹೂರ್ತ ಫೀಕ್ಸ್ ಆಗಿದೆ. ಜೊತೆಗೆ 18 ರಂದು ನಾಮ ಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಈ ಹಿನ್ನಲೆಯಲ್ಲಿ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ರಾಜ್ಯದಲ್ಲಿ ಚುನಾವಣೆ ಎಂದರೆ ಸಹಜವಾಗಿ ತ್ರಿಕೋನ ಸ್ಪರ್ಧೆ ಇರುತ್ತಿತ್ತು. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ 4 ಸ್ಥಾನ, ಕಾಂಗ್ರೆಸ್ ಪಾಲಿಗೆ 2 ಸ್ಥಾನ, ಜೆಡಿಎಸ್ ಪಾಲಿಗೆ 1 ಸ್ಥಾನವಿದೆ. ಕಡಿಮೆ ಸ್ಥಾನಗಳಿಗೆ ಹೆಚ್ಚು ಫೈಪೋಟಿ ನಡೆಯುತ್ತಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹಳೆದು ತೂಗಿ ಟಿಕೆಟ್ ನೀಡಲು ಮೂರು ಪಕ್ಷಗಳು ತೀರ್ಮಾನ ಮಾಡಿವೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳ ಸಭೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷದ ವರಿಷ್ಟರು ತಮ್ಮ ತಮ್ಮ ಪಕ್ಷದ ನಾಯಕರೊಟ್ಟಿಗೆ ಸಭೆ ನಡೆಸಿ ಟಿಕೆಟ್ ಅಂತಿಮ ಮಾಡುವ ಸಾಧ್ಯತೆಯಿದೆ.
ಬಿಜೆಪಿ ಒಳಾಂಗಣ ಆಟವೇನು ?
ಬಿಜೆಪಿ ಆಡಳಿತ ಪಕ್ಷವಾಗಿರುವ ಕಾರಣಕ್ಕೆ ಸಹಜವಾಗಿ ಟಿಕೆಟ್ ಪಡೆಯಲು ಸಾಕಷ್ಟು ಜನ ರೇಸ್ ನಲ್ಲಿ ಇದ್ದಾರೆ. ಇಂದು ಸಂಜೆ 4 ಗಂಟೆಗೆ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆ ನೆಪ ಮಾತ್ರಕ್ಕೆ, ಅಂತಿಮ ತೀರ್ಮಾನ ದೆಹಲಿಯಲ್ಲಿ ಆಗುತ್ತದೆ. ಇದು ರಾಜ್ಯಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಇಲ್ಲಿ ರಾಜ್ಯ ನಾಯಕರು ಸಭೆ ನಡೆಸಿ ಅಂತಿಮ ಮಾಡಿ ಕಳಿಸುವ ಹೆಸರುಗಳನ್ನು ಕೇಂದ್ರ ನಾಯಕರು ಒಪ್ಪುವ ಸಾಧ್ಯತೆ ಕಡಿಮೆಯಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ದೆಹಲಿಯಲ್ಲಿ ಅಂತಿಮವಾದರೂ ನಮ್ಮ ಪ್ರಯತ್ನ ಬಿಡಬಾರದು ಎಂಬ ಕಾರಣಕ್ಕೆ ಕೊನೆಯವರಿಗೂ ಪೈಟ್ ಮಾಡಲಾಗುವುದು. ಟಿಕೆಟ್ ಫೈನಲ್ ಆಗುವುದು ದೆಹಲಿಯಲ್ಲಿ ಎಂದು ನಮಗೆ ಗೊತ್ತಿದೆ. ಆದರೂ ನಮ್ಮ ಪ್ರಯತ್ನ ನಮ್ಮದು ಎಂದು ಟಿಕೆಟ್ ಆಕಾಂಕ್ಷಿ ಒಬ್ಬರು ಹೇಳಿದ್ದಾರೆ. ಆದರೆ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಾರೆ ಎಂದು ಬಿಎಸ್.ವೈ ವಲಯದಲ್ಲಿ ಗುರುತಿಸಿಕೊಂಡವರೊಬ್ಬರು ಹೇಳಿದ್ದಾರೆ.
ಯಾರ ಕೈ ಗೆ ಹಸ್ತ
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ 2 ಸ್ಥಾನ ಮಾತ್ರ ಲಭ್ಯವಾಗಿವೆ. ಆದರೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಪೊಲಿಟಿಕಲ್ ಗಾಡ್ ಫಾದರ್ ಗಳನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತ, ಹಿಂದೂಳಿದ ವರ್ಗಗಳಿಗೆ ಮನ್ನಣೆ ನೀಡಬೇಕು. ಜೊತೆಗೆ ಮಹಿಳಾ ಮೀಸಲಾತಿ ನೀಡಬೇಕು ಎಂದು ಪಕ್ಷದಲ್ಲಿ ಒತ್ತಾಯ ಕೇಳಿ ಬಂದಿದೆ. ರಾಜ್ಯಸಭೆ ಚುನಾವಣೆಯಲ್ಲಿ ಹೆಚ್ಚುವರಿ ಮತಗಳನ್ನು ದೇವೇಗೌಡರಿಗೆ ಹಾಕುವಂತೆ ಕಾಂಗ್ರೆಸ್ ಹೈಕಮಾಂಡ್ ತಿಳಿಸಿತ್ತು. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ ನೀಡಿ ಏಕಾಏಕಿಯಾಗಿ ಘೋಷಣೆ ಮಾಡಿತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎಂದು ಘೋಷಣೆ ಮಾಡಿತ್ತು. ಇದೆ ಮಾದರಿಯಲ್ಲಿ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಭೆಯಲ್ಲಿ ಹಳೆದು ತೂಗಿ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಕಳಿಸಲು ರಾಜ್ಯ ನಾಯಕರ ತೀರ್ಮಾನ ಮಾಡಿದ್ದಾರೆ. ಹಾಗಾಗಿ ಹೈಕಮಾಂಡ್ ಅಂತಿಮ ಮಾಡಿ ಕಳಿಸಿದ ಬಳಿಕವೇ ಹೆಸರುಗಳು ಘೋಷಣೆ ಮಾಡುವ ಲೆಕ್ಕಚಾರದಲ್ಲಿ ಕಾಂಗ್ರೆಸೆ್ ನಾಯಕರು ಇದ್ದಾರೆ ಎನ್ನಲಾಗಿದೆ.
ದಳಪತಿಗಳ ಆಶೀರ್ವಾದದಲ್ಲಿ ಗೊಂದಲ
ಈ ಚುನಾವಣೆಯಲ್ಲಿ ಜೆಡಿಎಸ್ ಪಾಲಿಗೆ ಒಂದು ಸ್ಥಾನ ಸಿಕ್ಕಿದೆ. ಆದರೆ ಯಾರಿಗೆ ನೀಡಬೇಕು ಎಂಬ ವಿಚಾರದಲ್ಲಿ ದಳಪತಿಗಳಲ್ಲಿ ಗೊಂದಲ ಶುರುವಾಗಿದೆ. ಇಲ್ಲಿ ಹೆಚ್,ಡಿ.ದೇವೇಗೌಡರ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನಿರ್ಧಾರವೇ ಅಂತಿಮವಾಗುತ್ತದೆ. ಜೆ.ಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್, ಡಿ,ದೇವೇಗೌಡರು ತಮ್ಮ ಮಾನಸ ಪುತ್ರ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರಿಗೆ ಟಿಕೆಟ್ ನೀಡಬೇಕು ಎಂದು ಮನಸು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಆಪ್ತ ವಲಯಕ್ಕೆ ಟಿಕೆಟ್ ನೀಡಲು ಬಯಸಿದ್ದಾರೆ ಎಂಬ ಮಾಹಿತಿಗಳು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿದೆ. ಕುಮಾರಸ್ವಾಮಿ ಅಂಗಳದಲ್ಲು ಕುಪೇಂದ್ರರೆಡ್ಡಿ, ಕೋನರೆಡ್ಡಿ, ಮತ್ತು ಟಿ.ಏ ಶರವಣ ಅವರ ಹೆಸರಗಳಿವೆ. ಆದರೆ ಜೆಡಿಎಸ್ ತೆನೆ ಯಾರು ಹೊರುತ್ತಾರೆ ಎಂಬು ಸಭೆ ಬಳಿಕ ತಿಳಿಯುತ್ತದೆ.








