ಇಂದು ರಾಜ್ಯದಲ್ಲಿ 3,648 ಜನರಿಗೆ ಕೊರೊನಾ ದೃಢ, 72 ಮಂದಿ ಬಲಿ
ಬೆಂಗಳೂರು : ರಾಜ್ಯದಲ್ಲಿ ಎಂದಿನಂತೆ ಇಂದು ಕೂಡ ಕೊರೊನಾ ಸ್ಫೋಟವಾಗಿದ್ದು, 3,648 ಜನರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, 72 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 67,420ಕ್ಕೆ ಏರಿಕೆಯಾಗಿದ್ದರೇ ಮೃತಪಟ್ಟವರ ಸಂಖ್ಯೆ 1,403ಕ್ಕೆ ತಲುಪಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಪ್ರಕಾರ, ರಾಜಧಾನಿ ಬೆಂಗಳೂರು ನಗರದಲ್ಲಿ 1452, ಬೆಂಗಳೂರು ಗ್ರಾಮಾಂತರದಲ್ಲಿ 208, ಬಳ್ಳಾರಿ ಜಿಲ್ಲೆಯಲ್ಲಿ 234, ಧಾರವಾಡ ಜಿಲ್ಲೆಯಲ್ಲಿ 200, ವಿಜಯಪುರ ಜಿಲ್ಲೆಯಲ್ಲಿ 160, ಮೈಸೂರು ಜಿಲ್ಲೆಯಲ್ಲಿ 419, ಕಲಬುರ್ಗಿ ಜಿಲ್ಲೆಯಲ್ಲಿ 124, ಉಡುಪಿ ಜಿಲ್ಲೆಯಲ್ಲಿ 98, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 89, ಉತ್ತರ ಕನ್ನಡ ಜಿಲ್ಲೆಯಲ್ಲಿ 78, ದಾವಣಗೆರೆ ಜಿಲ್ಲೆಯಲ್ಲಿ 73, ಹಾಸನ ಜಿಲ್ಲೆಯಲ್ಲಿ 67, ಕೊಪ್ಪಳ ಜಿಲ್ಲೆಯಲ್ಲಿ 62, ಬೆಳಗಾವಿ ಜಿಲ್ಲೆಯಲ್ಲಿ 60, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 60, ರಾಮನಗರ ಜಿಲ್ಲೆಯಲ್ಲಿ 56, ತುಮಕೂರು ಜಿಲ್ಲೆಯಲ್ಲಿ 55, ಬಾಗಲಕೋಟೆ ಜಿಲ್ಲೆಯಲ್ಲಿ 54, ಚಾಮರಾಜನಗರ ಜಿಲ್ಲೆಯಲ್ಲಿ 49, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 43, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ
41, ಹಾವೇರಿ ಜಿಲ್ಲೆಯಲ್ಲಿ 36, ಗದಗ ಜಿಲ್ಲೆಯಲ್ಲಿ 31, ಚಿತ್ರದುರ್ಗ ಜಿಲ್ಲೆಯಲ್ಲಿ 29, ಬೀದರ್ ಜಿಲ್ಲೆಯಲ್ಲಿ 26, ಶಿವಮೊಗ್ಗ ಜಿಲ್ಲೆಯಲ್ಲಿ 19, ಕೊಡಗು ಜಿಲ್ಲೆಯಲ್ಲಿ 08 ಮತ್ತು ರಾಯಚೂರು ಜಿಲ್ಲೆಯಲ್ಲಿ 03 ಸೇರಿದಂತೆ ಒಟ್ಟು 3,648 ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಇಂದು ಕೊರೋನಾ ಸೋಂಕಿತರಾದಂತ 730 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ 23,795 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 42,216 ಸಕ್ರಿಯ ಪ್ರಕರಣಗಳಿವೆ.








