ಟೋಕಿಯೋ ಒಲಿಂಪಿಕ್ಸ್ : ಕ್ರೀಡಾ ಹಬ್ಬಕ್ಕೆ ಇಂದು ತೆರೆ Tokyo Olympics saaksha tv
ಟೋಕಿಯೋ : ಇಲ್ಲಿ ಜುಲೈ 23 ರಿಂದ ಆರಂಭವಾಗಿದ್ದ ಟೋಕಿಯೋ ಒಲಿಂಪಿಕ್ಸ್ 2020 ನಿನ್ನೆಗೆ ಮುಕ್ತಾಯವಾಗಿದೆ.
ಇಂದು ಕ್ರೀಡಾಕೂಟಕ್ಕೆ ಭರ್ಜರಿ ಸಮಾರೋಪ ಸಮಾರಂಭ ನಡೆಯಲಿದೆ.
ಟೋಕಿಯೋ ಒಲಿಂಪಿಕ್ಸ್ ಸಮಾರೋಪ ಸಮಾರಂಭವು ಟೋಕಿಯೋದಲ್ಲಿನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಭಾರತದಲ್ಲಿ ಈ ಸಮಯ ಸಂಜೆ 4.30 ಆಗಿರುತ್ತದೆ.
ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಸೇರಿ ಒಟ್ಟು 7 ಪದಕ ಬಂದಿವೆ.
ಈ ಮೂಲಕ ಅತಿ ಹೆಚ್ಚು ಪದಕ ಗೆದ್ದು ಭಾರತ ಒಲಿಂಪಿಕ್ಸ್ ಇತಿಹಾಸದಲ್ಲೇ ಹೊಸದೊಂದು ದಾಖಲೆ ನಿರ್ಮಿಸಿದೆ.
ಜೊತೆಗೆ ಒಲಿಂಪಿಕ್ಸ್ ಪಾಯಿಂಟ್ ಪಟ್ಟಿಯಲ್ಲಿ ಭಾರತ 47ನೇ ಸ್ಥಾನದಲ್ಲಿದೆ.









