ಟೊಕಿಯೋ ಒಲಂಪಿಕ್ಸ್ | ಕ್ವಾರ್ಟರ್ ಫೈನಲ್ ನಲ್ಲಿ ಬಾಕ್ಸರ್ ಸತೀಶ್ ಗೆ ಸೋಲು
ಟೋಕಿಯೊ : ಪದಕದ ಭರವಸೆ ಮೂಡಿಸಿದ್ದ ಬಾಕ್ಸರ್ ಸತೀಶ್ ಕುಮಾರ್ ಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲಾಗಿದೆ. (91 ಕೆಜಿ) ಬಾಕ್ಸಿಂಗ್ ವಿಭಾಗದಲ್ಲಿ ವಿಶ್ವದ ನಂಬರ್ 1 ಬಾಕ್ಸರ್ ಉಜ್ಬೇಕಿಸ್ತಾನದ ಬಖೋದಿರ್ ಜಲೋವ್ ವಿರುದ್ಧ ಸತೀಶ್ ಕುಮಾರ್ ಸೋಲು ಅನುಭವಿಸಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
ಜಮೈಕಾದ ರಿಕಾರ್ಡೊ ಬ್ರೌನ್ ಅವರನ್ನು 4-1 ಪಾಯಿಂಟುಗಳ ಅಂತರದಿಂದ ಸೋಲಿಸುವ ಮೂಲಕ ಸತೀಶ್ ಕುಮಾರ್ ಅವರು 91 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದ್ರೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲುಂಡಿದ್ದಾರೆ.
ಜಮೈಕಾದ ರಿಚರ್ಡೊ ಬ್ರೌನ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಭಾರತದ ಮೊದಲ ಸೂಪರ್ ಹೆವಿ ವೆಯ್ಟರ್ (+91 ಕೆ.ಜಿ) ಬಾಕ್ಸರ್ ಕುಮಾರ್ ಗಾಯಗೊಂಡಿದ್ದರು. ಅವರಿಗೆ ಏಳು ಹೊಲಿಗೆಗಳನ್ನು ಹಾಕಲಾಗಿತ್ತು. ಬಳಿಕ ಕ್ವಾರ್ಟರ್ ಫೈನಲ್ ನಲ್ಲಿ ಆಡಲು ಅವಕಾಶ ನೀಡಲಾಗಿತ್ತು.
ಉತ್ತರ ಪ್ರದೇಶದ ಬುಲಂದರ್ ಶಹರ್ ನಿವಾಸಿ ಸತೀಶ್ ಕುಮಾರ್, ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಸೇನಾ ತರಬೇತುದಾರರ ಮೂಲಕ ಉತ್ತಮ ಮೈಕಟ್ಟಿನ ಕಾರಣದಿಂದ ಕ್ರೀಡೆಗೆ ಪರಿಚಯಿಸಲ್ಪಟ್ಟರು. ಸತೀಶ್ ಕುಮಾರ್ ಏಷ್ಯನ್ ಗೇಮ್ಸ್ ನ ಕಂಚು ಮತ್ತು ಕಾಮನ್ ವೆಲ್ತ್ ಗೇಮ್ಸ್ ನ ಬೆಳ್ಳಿ ವಿಜೇತರು.