ಬ್ಯಾಡ್ ನ್ಯೂಸ್ : ಒಲಿಂಪಿಕ್ಸ್ ಮುಂದೂಡಿಕೆ..?
ಟೋಕಿಯೊ : ಕೊರೊನಾ ರೂಪಾಂತರಿ ವೈರಸ್ ಜಪಾನಿನಲ್ಲಿ ಅಲ್ಲಕಲ್ಲೋಲ ಸೃಷ್ಠಿ ಮಾಡಿದೆ. ಕೊರೊನಾ ಕೇಸ್ ಗಳು ಹೆಚ್ಚಾದ ಕಾರಣ ಈಗಾಗಲೇ ರಾಜಧಾನಿ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.
ಸದ್ಯ ದೇಶದಲ್ಲಿ ಕಠಿಣ ನಿಬರ್ಂಧಗಳು ಜಾರಿಯಲ್ಲಿವೆ. ರೂಪಾಂತರಿ ಕೊರೊನಾ ವೈರಸ್ ಹಿನ್ನೆಲೆ ವಿದೇಶದಿಂದ ಬರುವ ಪ್ರವಾಸಿಗರಿಗೆ ನಿಬರ್ಂಧ ಹೇರಲಾಗಿದೆ. ಹಲವು ದೇಶಗಳಿಗೆ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿ ನಡೆಯಬೇಕಿರುವ ಟೋಕಿಯೊ ಒಲಿಂಪಿಕ್ಸ್ ರದ್ದಾಗುವ ಸಾಧ್ಯತೆಗಳು ಹೆಚ್ಚಿವೆ. ಅಥವಾ ಕೆಲವು ದಿನಗಳ ಕಾಲ ಒಲಿಂಪಿಕ್ಸ್ ಅನ್ನು ಮುಂದೂಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಟೋಕಿಯೊ ಒಲಿಂಪಿಕ್ಸ್ ಅನ್ನು ರದ್ದು ಮಾಡಬೇಕೆಂದು ಶೇ 80ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರೇ, 35.3 ರಷ್ಟು ಮಂದಿ ಒಲಿಂಪಿಕ್ಸ್ ಅನ್ನು ಮುಂದೂಡಬೇಕೆಂದು ಹೇಳಿದ್ದಾರೆ ಎಂದು ಜಪಾನಿಗೆ ಸಂಬಂಧಿಸಿದ ಮೀಡಿಯಾಗಳು ವರದಿ ಮಾಡಿವೆ.
ಅಂದಹಾಗೆ ಈ ಟೋಕಿಯೋ ಒಲಿಂಪಿಕ್ಸ್ 2021ರ ಜುಲೈನಲ್ಲಿ ನಡೆಯಬೇಕಿತ್ತು. ಕೊರೊನಾ ಹಿನ್ನೆಲೆ 2021ರ ಜುಲೈ 23ಕ್ಕೆ ಮುಂದೂಡಲಾಗಿತ್ತು.
ಜಪಾನ್ ನಲ್ಲಿ ಕೊರೊನಾ ತನ್ನ ಬಾಹುಗಳನ್ನು ವಿಸ್ತರಿಸುತ್ತಲೇ ಸಾಗಿದೆ. 2 ಲಕ್ಷ 80 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 4,000 ಜನರು ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel