ಟೋಕಿಯೊ ಒಲಿಂಪಿಕ್ಸ್ : ಸೆಮೀಸ್ ನಲ್ಲಿ ಭಾರತಕ್ಕೆ ಸೋಲು
ಟೋಕಿಯೋ : ಭಾರತ ಪುರುಷರ ಹಾಕಿ ತಂಡದ ಚಿನ್ನದ ಕನಸು ಕಮರಿದೆ. ಟೋಕಿಯೋ ಒಲಿಂಪಿಕ್ಸ್ ಪುರುಷರ ಹಾಕಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ 5-2 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.
ಓಯ್ ಹಾಕಿ ಸ್ಟೆಡಿಯಂ ನಾರ್ಥ್ ಪಿಚ್ ನಲ್ಲಿ ನಡೆದ ಸೆಮೀಸ್ ನಲ್ಲಿ ಆರಂಭದಿಂದಲೇ ಭಾರತದ ಆಟಗಾರರು ಆಕ್ರಮಣಕಾರಿ ಪ್ರದರ್ಶನ ತೋರಿದರು. ಪರಿಣಾಮ ಏಳನೇ ನಿಮಿಷದಲ್ಲಿ ಮೊದಲ ಕ್ವಾರ್ಟರ್ ಗೋಲು ಬಾರಿಸಿದರು. ಆಮೇಲೆ ಮೊದಲಾರ್ಧ ಮುಗಿಯುವಷ್ಟರಲ್ಲಿ ಭಾರತ ತಂಡ 2-1 ಮುನ್ನಡೆ ಕಾಯ್ದುಕೊಂಡು ಆತ್ಮವಿಶ್ವಾದಲ್ಲಿತ್ತು.
ಆದರೆ ನಂತರ ಬೆಲ್ಜಿಯಂ ಅಸಲಿ ಆಟ ಶುರುವಾಯ್ತು. ಮೊದಲಿಗಿಂತಲೂ ಹೆಚ್ಚು ಆಕ್ಟೀವ್ ಆಗಿ ಕಾಣಿಸಿಕೊಂಡಿ ಬೆಲ್ಜಿಯಂ ತಂಡ ದ್ವಿತೀಯಾರ್ಧದ ಆರಂಭದಲ್ಲೇ ಗೋಲು ಬಾರಿ ಅಂಕಗಳನ್ನು ಸಮಗೊಳಿಸಿತು.
ಇನ್ನು ಮೂರನೇ ಕ್ವಾರ್ಟರ್ ನಿಂದ ಮತ್ತಷ್ಟು ರೋಚಕತೆಯತ್ತ ಸಾಗಿದ ಪಂದ್ಯದಲ್ಲಿ ಪೆನಾಲ್ಟಿಗಳ ಲಾಭ ಪಡೆಯಲು ಭಾರತ ವಿಫಲವಾಯಿತು.
ಇತ್ತ ಬೆಲ್ಜಿಯಂ ಸಿಕ್ಕ ಅವಕಾಶಗಳನ್ನು ಅದ್ಬುತವಾಗಿ ಬಳಸಿಕೊಂಡು ಬ್ಯಾಕ್ ಟು ಬ್ಯಾಕ್ ಗೋಲ್ ಗಳನ್ನು ಬಾರಿಸುತ್ತಾ ಗೆಲುವಿನ ಸನಿಹಕ್ಕೆ ಸಾಗಿದ್ರೆ ಭಾರತ ತಂಡ ಪಂದ್ಯ ಸಾಗುತ್ತಿದ್ದಂತೆ ಗೆಲುವಿನಿಂದ ದೂರ ಸರಿಯುತ್ತಾ ಹೋಯ್ತು. ಅಂತಿಮವಾಗಿ 5-2 ಗೋಲುಗಳ ಅಂತರದಲ್ಲಿ ಬೆಲ್ಜಿಯಂ ಗೆಲುವಿನ ನಗೆ ಬೀರಿತು.
ಇನ್ನು ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಎರಡು ಗೋಲುಗಳನ್ನು ಗಳಿಸಿದರೆ, ಬಾಲೊಯೆಪರಾಟ್ ಮತ್ತು ಡೊಹ್ಮೆನ್ ತಲಾ ನಾಲ್ಕು ಗೋಲುಗಳನ್ನು ಗಳಿಸಿದರು. ಭಾರತದ ಪರ ಮನದೀಪ್ ಮತ್ತು ಹರ್ಮನ್‍ಪ್ರೀತ್ ಸಿಂಗ್ ತಲಾ ಒಂದು ದಾಖಲಿಸಿದರು.









